Breaking
25 Sep 2026, Fri

ಹಸಿರು ಭವಿಷ್ಯದ ಕನಸಿಗೆ ಗಿಡ ನೆಟ್ಟು ಚಾಲನೆ ನೀಡಿದ ಪೆರ್ನೆ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಮಾಣಿ ಯುವ ವಾಹಿನಿಯ ಸದಸ್ಯರು

ಪೆರ್ನೆ: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಶ್ರೀರಾಮಚಂದ್ರ ಪದವಿ ಪೂರ್ವ ಕಾಲೇಜು, ಪೆರ್ನೆಯಲ್ಲಿ “ಯುವ ವೃಕ್ಷೋತ್ಸವ – 2026” ಕಾರ್ಯಕ್ರಮ ಆಚರಿಸಲಾಯಿತು.


ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷರಾದ ಗಣೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪರಿಸರ ಸಂರಕ್ಷಣೆ ಹಾಗೂ ವೃಕ್ಷಗಳ ಮಹತ್ವದ ಕುರಿತು ಮಾತನಾಡಿ ಪ್ರತಿಯೊಬ್ಬರೂ ಕನಿಷ್ಠ ಒಂದು ಗಿಡವನ್ನು ನೆಟ್ಟು ಅದರ ಪೋಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಶೈಲಾ ಎನ್., ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಸತ್ಯನಾರಾಯಣ ರೈ ಕೆ.ಎಂ., ಇಕೋ ಕ್ಲಬ್ ಸಂಚಾಲಕರಾದ ಆಶಾಲತಾ, ಇಂಟರ್ಯಾಕ್ಟ್ ಕ್ಲಬ್ ಸಂಚಾಲಕಿ ಇಂದಿರಾ, ದೈಹಿಕ ಶಿಕ್ಷಣ ನಿರ್ದೇಶಕರಾದ ನಿತಿನ್ ಕೊಡಿಯಾ, ವಿನೋದ್ ಬಾಕಿಮಾರು,ಲೋಕೇಶ್ ಮಂಜುಶ್ರೀ ಗೌರವ ಸಲಹೆಗಾರರು ಬಿರುವೆರ್ ಪೆರ್ನೆ ಬಿಳಿಯೂರು, ಬಿರುವೆರ್ ಪೆರ್ನೆ ಬಿಳಿಯೂರು ಅಧ್ಯಕ್ಷರಾದ ಉಮೇಶ್, ಶ್ರೀರಾಮಚಂದ್ರ ಪ್ರೌಢಶಾಲಾ ಶಿಕ್ಷಕರಕ್ಷಕ ಸಂಘದ ಅಧ್ಯಕ್ಷರಾದ ಚೇತನ್ ಮಲ್ಲಡ್ಕ ಯುವವಾಹಿನಿ ಉಪಾಧ್ಯಕ್ಷರಾದ ಸುಜಿತ್ ಅಂಚನ್, ಸಂಘಟನಾ ಕಾರ್ಯದರ್ಶಿ ಶುಭ ಪೆರ್ನೆ ಅಮಿತಾ ಪೆರ್ನೆ,ವಿಕ್ರಂ ಬಿಳಿಯೂರು, ಶಕೀಲಾಕೃಷ್ಣ ಮಿತ್ತಕೋಡಿ, ಮೊದಲಾದವರು ಉಪಸ್ಥಿತರಿದ್ದರು

ಈ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ವಿದ್ಯಾರ್ಥಿಗಳೊಂದಿಗೆ ಸೇರಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು.

Leave a Reply

Your email address will not be published. Required fields are marked *