ಕುಕ್ಕಿಪಾಡಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಹಾಗೂ ಗ್ರಾಮೀಣ ಕ್ರೀಡಾಕೂಟ ಕಾರ್ಯಕ್ರಮ

ಬಂಟ್ವಾಳ: ಫ್ರೆಂಡ್ಸ್ ಕುಕ್ಕಿಪಾಡಿ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವ ,ಸ್ಥಳೀಯರಿಗೆ ಗ್ರಾಮೀಣ ಕ್ರೀಡಾಕೂಟ ಕಾರ್ಯಕ್ರಮವು ಆ. 17 ರಂದು ನೇಲ್ಯಕುಮೇರಿನ ಕುಕ್ಕಿಪಾಡಿ ಕೇಂದ್ರ ಮೈದಾನದಲ್ಲಿ ನಡೆಯಲಿದೆ.

ಕಾರ್ಯಕ್ರಮವನ್ನು ರಮೇಶ್ ಪಂಡಿತ್ ನೇಲ್ಯಕುಮೇರು , ಜಗದೀಶ್ ಶೆಟ್ಟಿ, ಮಾವಿನಕಟ್ಟೆ, ಗ್ರಾಮ ಪಂಚಾಯತ್ ಚೆನೈತೋಡಿ ಅಧ್ಯಕ್ಷರು ವನಿತಾ ನಾಯ್ಕ್, SKDRP ಸಿದ್ದಕಟ್ಟೆ ವಲಯದ ಮೇಲ್ವಿಚಾರಕರು ಹರಿಣಾಕ್ಷಿ, ಕುಕ್ಕಿಪಾಡಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪದ್ಮ ನಾಯಕ್, ಪದ್ಮನಾಭ ಪೂಜಾರಿ ಎಲ್ಪೇಲು, ಸೀತರಾಮ್ ಶಾಂತಿ, ಪುಷ್ಪರಾಜ್ ನೇಲ್ಯಕುಮೇರು , ರವಿ ಕೊಂಡಬೆಟ್ಟು, ಇಮ್ಮನ್ಯೂವಲ್ ಡಿ ಸೋಜ ವಿರೋಡಿ, ಭೀಮ ಲೈನ್ ಮ್ಯಾನ್, ರಾಜು ಪೂಜಾರಿ ಹಲಾಯಿ, ಫ್ರೆಂಡ್ಸ್ ಕುಕ್ಕಿಪಾಡಿ ಅಧ್ಯಕ್ಷರು ರಂಜಿತ್ ನಾಯ್ಕ್, ನೇಲ್ಯಕುಮೇರು , ನೀತಾ ಉಮೇಶ್ ಹಲಾಯಿ ಉದ್ಘಾಟಿಸಲಿದ್ದಾರೆ.

ಬೆಳಿಗ್ಗೆ ಗಂಟೆ 8-30 ಕ್ಕೆ ಕ್ರೀಡಾಕೂಟ ಉದ್ಘಾಟನೆ, 9-30ಗಂಟೆಗೆ ಅಂಗನವಾಡಿ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಆಟೋಟ ಸ್ಪರ್ಧೆಗಳು ಸ್ಥಳಿಯರಿಗೆ ಕ್ರಿಕೆಟ್ ಪಂದ್ಯಾಟ, ಹಗ್ಗಜಗ್ಗಾಟ ಮತ್ತು ವಾಲಿಬಾಲ್ ಪಂದ್ಯಾವಳಿ ನಡೆಯಲಿದೆ. ಮಧ್ಯಾಹ್ನ ಭೋಜನ ವ್ಯವಸ್ಥೆಯಿದ್ದು ಬಳಿಕ ಸಂಜೆ ಬಹುಮಾನ ವಿತರಣೆ ಕಾರ್ಯಕ್ರಮವು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Leave a Reply

Your email address will not be published. Required fields are marked *