ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾರ್ಥಮಿಕ ಶಾಲೆ ಪುಚ್ಚಮೊಗರಿನಲ್ಲಿ ಪೋಷಕರ ಸಭೆ

ಮೂಡಬಿದ್ರೆ: ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾರ್ಥಮಿಕ ಶಾಲೆ ಪುಚ್ಚಮೊಗರಿನಲ್ಲಿ ಪೋಷಕರ ಸಭೆಯು ಆಗಸ್ಟ್ 5 ರಂದು ನಡೆಯಿತು.

ಈ ಕಾರ್ಯಕ್ರಮದಲ್ಲಿ ಮಾತಾನಾಡಿದ ಮೂಡಬಿದ್ರೆ ತಾಲೂಕಿನ ಮಾನ್ಯ ತಹಶೀಲ್ದಾರ ಶ್ರೀಧರ್‌ ಎಸ್‌ ಮುಂದಲಮನಿಯವರು ನಾನೂ ಕೂಡ ಸರಕಾರಿ ಶಾಲೆಯಲ್ಲಿ ಕಲಿತು ಈ ಹಂತಕ್ಕೆ ಬಂದಿದ್ದೇನೆ . ವಿದ್ಯಾರ್ಥಿಗಳು ಶ್ರದ್ದೆ ಹಾಗೂ ಗುರಿಯನ್ನಿಟ್ಟು ಆಸಕ್ತಿಯಿಂದ ಓದಿದರೆ ಯಶಸ್ಸು ಸಿಗುತ್ತದೆ ಎಂದರು.

ಇದೇ ಸಂದರ್ಭದಲ್ಲಿ ಕೊಡುಗೈ ದಾನಿಯಾದ ಟೋಟಲ್‌ ಕ್ಲೀನ್‌ ಲಾಂಡ್ರಿ ಸರ್ವಿಸ್‌ ಇದರ ಮಾಲಕರಾದ ಮೊಹಮ್ಮದ್‌ ಎಸ್‌ ಅವರು ಎಲ್ಲಾ ಮಕ್ಕಳಿಗೆ Squad ಡ್ರೆಸ್ ನ್ನು ನೀಡಿ ಮಾತಾನಾಡಿದ ಅವರು ವಿದ್ಯಾರ್ಥಿಗಳ ಮುಂದಿನ ಭವಿಷ್ಯ ಉತ್ತಮವಾಗಿರಬೇಕಾದರೆ ಪೋಷಕರು ಅವರ ಆಸಕ್ತಿಗೆ ಪ್ರೋತ್ಸಾಹ ನೀಡಬೇಕು ಎಂದರು.

ಈ ವೇಳೆ ನಿವೃತ್ತ ಶಿಕ್ಷಕರಾದ ನಿರ್ಮಲಾರವರು ಪೋಷಕರು ಮಕ್ಕಳಿಗೆ ಶಿಸ್ತು ಬದ್ದ ಜೀವನಶೈಲಿ ಕಲಿಸಬೇಕು. ಮಕ್ಕಳ ಶಿಕ್ಷಣದ ಕುರಿತು ಮಕ್ಕಳೊಂದಿಗೆ ಹಾಗೂ ಶಿಕ್ಷಕರೊಂದಿಗೆ ಸಮನ್ವಯತೆ ಸಾಧಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮೂಡಬಿದ್ರೆ ತಾಲೂಕಿನ ಮಾನ್ಯ ತಹಶೀಲ್ದಾರ ಶ್ರೀಧರ್‌ ಎಸ್‌ ಮುಂದಲಮನಿಯವರು ಹಾಗೂ ಟೋಟಲ್‌ ಕ್ಲೀನ್‌ ಲಾಂಡ್ರಿ ಸರ್ವಿಸ್‌ ಇದರ ಮಾಲಕರಾದ ಮೊಹಮ್ಮದ್‌ ಎಸ್‌ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಎಸ್‌ ಡಿ ಎಂ ಸಿ ಅದ್ಯಕ್ಷರಾದ ಮೊಹಮ್ಮದ್‌ ಝೂಬಿಯವರು ವಹಿಸಿದ್ದರು. ತುಳು ಸಾಹಿತಿಗಳಾದ ಶ್ರೀ ಉಗ್ಗಪ್ಪ ಪೂಜಾರಿ , ಎಸ್‌ ಡಿ ಎಂ ಸಿ ಉಪಾಧ್ಯಕ್ಷರಾದ ಅಮಿತಾ, ಶಾಲಾ ಮುಖ್ಯ ಶಿಕ್ಷಕರಾದ ವಸಂತಿ ಕುಮಾರಿ ಹಾಗೂ ಎಸ್‌ ಡಿ ಎಂ ಸಿ ಪದಾಧಿಕಾರಿಗಳು ಹಾಗೂ ಎಲ್ಲಾ ಪೋಷಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *