ಬಂಟ್ವಾಳ: ಶ್ರೀ ನಾಗಬ್ರಹ್ಮ ಸುಬ್ರಹ್ಮಣೇಶ್ವರ ಭಜನಾ ಮಂಡಳಿ(ರಿ.) ಬದನಡಿ ಕೊಯಿಲ ವತಿಯಿಂದ ಆ.09 ರಂದು ರಕ್ಷಾಬಂಧನ ಕಾರ್ಯಕ್ರಮ ಹಾಗೂ ಮಾತೃ ಧ್ಯಾನ-ಮಾತೃಪೂಜನ-ಮಾತೃ ಭೋಜನ ಕಾರ್ಯಕ್ರಮ ಶ್ರೀ ಕ್ಷೇತ್ರ ಬದನಡಿಯಲ್ಲಿ ನಡೆಯಿತು.

ಹಿರಿಯ ಸದಸ್ಯರು ಆನಂದ ಸಪಲ್ಯ ಕೈತ್ರೋಡಿ, ಜಿಲ್ಲಾ ಸಹ ಸಂಚಾಲಕರು ಪತಂಜಲಿ ಯೋಗದ ಲೋಕೇಶ್ ಪೊಳಲಿ , ಭಜನಾ ಮಂಡಳಿ ಅಧ್ಯಕ್ಷ ರವೀಂದ್ರ ಪೂಜಾರಿ ಬದನಡಿ ಕಾರ್ಯಕ್ರಮ ಉದ್ಘಾಟಿಸಿದರು.

ಜಿಲ್ಲಾ ಸಹ ಸಂಚಾಲಕರು ಪತಂಜಲಿ ಯೋಗದ ಲೋಕೇಶ್ ಪೊಳಲಿ ಮಾತೃ ಧ್ಯಾನ-ಮಾತೃಪೂಜನ-ಮಾತೃ ಭೋಜನ ಕಾರ್ಯಕ್ರಮದ ಬಗ್ಗೆ ಬೌದ್ಧಿಕ್ ನೀಡಿದರು. ಕಾರ್ಯಕ್ರಮದಲ್ಲಿ ಮಂಡಳಿಯ ಸುಮಾರು 150ಕ್ಕಿಂತ ಹೆಚ್ಚು ಮಂದಿ ಭಾಗವಹಿಸಿದ್ದರು.



