Breaking
21 Mar 2026, Sat

ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನ  ಜಾತ್ರೆ:ಭೋಜನ ಬಡಿಸಿದ ಶಾಸಕ ಅಶೋಕ ಕುಮಾರ್ ರೈ

ಪುತ್ತೂರು: ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ದ ಜಾತ್ರಾಮಹೋತ್ಸವದ ನಾಲ್ಕನೇ ದಿನ ಮಧ್ಯಾಹ್ನ ಸುಮಾರು 15,000 ಭಕ್ತರು ಅನ್ನಪ್ರಸಾದ ಸ್ವೀಕರಿಸಿ ಸಂತೃಪ್ತಿಪಟ್ಟರು.ಮಧ್ಯಾಹ್ನ 12 ಗಂಟೆಗೆ ಅನ್ನ ಸಂತರ್ಪಣೆ ಆರಂಭವಾಗಿ ಕುಳಿತು ಊಟ ಮಾಡುವ ಮತ್ತು ಬಫೆಯಲ್ಲಿ ರುಚಿಕರವಾದ ಊಟದ ವ್ಯವಸ್ಥೆ ಮಾಡಲಾಗಿತ್ತು.

ಯಾವುದೇ ನೂಕುನುಗ್ಗಲು ಇರಲಿಲ್ಲ. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಮೇಲುಸ್ತುವಾರಿಯಲ್ಲಿ ಶಿಸ್ತುಬದ್ಧವಾದ ವ್ಯವಸ್ಥೆ ಮಾಡಲಾಗಿತ್ತು.

ಮಧ್ಯಾಹ್ನ ದೇವಸ್ಥಾನಕ್ಕೆ ಪುತ್ತೂರು ಶಾಸಕ ಅಶೋಕ ರೈ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಅನ್ನಛತ್ರಕ್ಕೆ ತೆರಳಿ ವ್ಯವಸ್ಥೆಯನ್ನು ವೀಕ್ಷಿಸಿ ಸ್ವಚ್ಚತೆಯ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಸರತಿಸಾಲಿನಲ್ಲಿ ನಿಂತು ಬಫೆ ಊಟ ಸ್ವೀಕರಿಸಿದರು.ಬಳಿಕ ಸ್ವತಃ ಸ್ವಯಂಸೇವಕರ ಜೊತೆ ಸೇರಿ ಅನ್ನ ಬಡಿಸಿ ಗಮನ ಸೆಳೆದರು.

ಎರಡು ವರ್ಷಗಳಲ್ಲಿ ಮಹಾಲಿಂಗೇಶ್ವರ ದೇವಸ್ಥಾನ ವನ್ನು ಪ್ರಸಿದ್ಧ ಯಾತ್ರಾಸ್ಥಳವನ್ನಾಗಿ ಮಾರ್ಪಡಿಸಲಾಗುವುದು‌ ಎಂದು ಸುದ್ದಿಗಾರರೊಂದಿಗೆ ಮತನಾಡುತ್ತಾ ತಿಳಿಸಿದರು. ಅಕ್ರಮವಾಗಿದ್ದ ಸ್ಥಳವು ಮಹಾಲಿಂಗೇಶ್ವರ ದೇವರಿಗೆ ಸಮರ್ಪಣೆಯಾಗಿದೆ. ಮುಂದಿನ ದಿನಗಳಲ್ಲಿ ಯಾತ್ರಾರ್ಥಿಗಳಿಗೆ ಬೇಕಾದ ಅನುಕೂಲಗಳನ್ನು ಮಾಡಿಕೊಡಲಾಗುವುದು ಎಂದರು. ಪ್ರಸಿದ್ಧವಾದ ಕೆರೆಯನ್ನು ಸಂರಕ್ಷಿಸಿ ಭೋಜನಾ ಶಾಲೆ, ವಸತಿ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳಾಗಲಿವೆ ಎಂದರು.

ವರದಿ: ಜಯಾನಂದ ಪೆರಾಜೆ

Leave a Reply

Your email address will not be published. Required fields are marked *