ಸಿದ್ದಕಟ್ಟೆ: ಇಂದು ಸಿದ್ಧಕಟ್ಟೆ ಮೂರ್ತೇದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಜೀರ್ಣೋದ್ದಾರಗೊಳ್ಳುತ್ತಿರುವ ಕುಪ್ಪೆಟ್ಟು ಪಂಜುರ್ಲಿ ಮೂಲಸ್ಥಾನದ ಮುಖ್ಯ ಬಾಗಿಲಿನ ಬೆಳ್ಳಿದಾರಂದಕ್ಕೆ ಬೆಳ್ಳಿ ಹೊದಿಸುವ ಕಾರ್ಯಕ್ಕೆ ರೂಪಾಯಿ 10000 ಹತ್ತು ಸಾವಿರ ದೇಣಿಗೆಯನ್ನು ಹಸ್ತಾಂತರಿಸಲಾಯಿತು.
ಕುಪ್ಪೆಟ್ಟು ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ರತ್ನಾಕರ ಮದಂಗೋಡಿ, ಹಾಗೂ ವಾಮನ್ ಬುನ್ನನ್ ದೇಣಿಗೆ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮೂರ್ತೇದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಜಗದೀಶ್ ಕೊಯ್ಲ ಹಾಗೂ ಬ್ಯಾಂಕಿನ ನಿರ್ದೇಶಕರುಗಳಾದ ಗೋಪಾಲ್ ಬಂಗೇರ, ಸೀತಾರಾಮ್ ಶಾಂತಿ, ದೇವರಾಜ್ ಸಾಲಿಯಾನ್ ಪ್ರೀತಿ ವಸಂತ್, ರಂಜಿನಿ ದಿವಾಕರ್ ಕಂಕನಾಡಿ ರೆಸ್ಟೋರೆಂಟ್ ಮಾಲಕರಾದ ಲೋಕೇಶ್ ಪೂಜಾರಿ ಕಂಕನಾಡಿ, ಬ್ಯಾಂಕ್ ಮ್ಯಾನೇಜರ್ ಕು. ಗೀತಾ ಕೋಟ್ಯಾನ್ ಉಪಸ್ಥಿತರಿದ್ದರು.




