ವಿಟ್ಲ: ಸಾಲೆತ್ತೂರು ವಾಲ್ತಾಜೆ ಶ್ರೀ ಅಣ್ಣಪ್ಪ ಪಂಜುರ್ಲಿ, ಸತ್ಯದೇವತೆ, ಧೂಮಾವತಿ, ಕಲ್ಲುರ್ಟಿ ಕ್ಷೇತ್ರದ ಕೋಲೋತ್ಸವದ ಸಂದರ್ಭದಲ್ಲಿ ಚುಟುಕು ಕವಿಗೋಷ್ಠಿ ಕಾರ್ಯಕ್ರಮ ನಡೆಯಿತು
.ದ.ಕ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಹರೀಶ್ ಸುಲಾಯ ಒಡ್ಡಂಬೆಟ್ಟು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ದೈವಕಲದೊಳಗೆ ಸಾಹಿತ್ಯ ಕಾರ್ಯಕ್ರಮ ವಿಶಿಷ್ಟ ಚಿಂತನೆ. ಸಾಹಿತ್ಯಾಸಕ್ತ ಕುಟುಂಬ ಸದಸ್ಯರ ಒಮ್ಮತದ ನಿರ್ಣಯದಿಂದ ಸಾಧ್ಯವಾಗಿದೆ. ಪ್ರತಿಯೊಬ್ಬರಲ್ಲೂ ಕವಿ ಮನಸ್ಸು ಇದ್ದಾಗ ಉತ್ತಮ ವ್ಯಕ್ತಿಯಾಗಲು ಸಾಧ್ಯ ಎಂದು ತಿಳಿಸಿದರು.
ಹಿರಿಯ ಪತ್ರಕರ್ತ, ಕವಿ ಗಣೇಶ್ ಪ್ರಸಾದ್ ಪಾಂಡೇಲು ಮಾತನಾಡಿ ಬರಹಗಾರರು ಸಿಕ್ಕಿದ ಅವಕಾಶಗಳನ್ನು ಬಳಸಿಕೊಳ್ಳಬೇಕು. ಚುಟುಕು ಬರಹದ ಮೂಲಕ ಮುಂದುವರಿಯಬೇಕು ಎಂದರು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಇರಾ ನೇಮು ಪೂಜಾರಿ ಮಾತನಾಡಿ ಓಂಕಾರ ಎಂಬ ಚುಟುಕಿನಿಂದ ಜಗತ್ತು ಹುಟ್ಟಿಕೊಂಡಿದೆ. ನೋವು ಮತ್ತು ನಲಿವಿನಿಂದ ಸಾಹಿತ್ಯ ಹುಟ್ಟಿಕೊಳ್ಳುತ್ತವೆ. ಬದುಕಿನ ಪ್ರತಿಯೊಂದು ಕ್ಷಣಗಳಲ್ಲಿಯೂ ಚುಟುಕುಗಳು ಹಾಸುಹೊಕ್ಕಾಗಿವೆ ಎಂದು ತಿಳಿಸಿದರು.
ಕವಯಿತ್ರಿ ಸೀತಾಲಕ್ಷ್ಮಿ ವರ್ಮ ವಿಟ್ಲ, ಬಂಟ್ವಾಳ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಆನಂದ ರೈ ಅಡ್ಕಸ್ಥಳ, ಪತ್ರಕರ್ತ ವಿಷ್ಣುಗುಪ್ತ ಪುಣಚ, ವಾಲ್ತಾಜೆ ಕರ್ಕೇರ ಕುಟುಂಬಸ್ಥರ ಟ್ರಸ್ಟ್ ಅಧ್ಯಕ್ಷ ಮೋಹನ್ ಗುರ್ಜಿನಡ್ಕ, ವಿಶ್ವನಾಥ ಪೂಜಾರಿ ಕರಂಬಾರು, ಚಂದ್ರಹಾಸ ಪೂಜಾರಿ ಕುರ್ನಾಡು, ಹಿರಿಯರಾದ ಗಿರಿಯಪ್ಪ ಪೂಜಾರಿ ಇರಾ, ಈಶ್ವರ ಪೂಜಾರಿ ಅಂಗಡಿ ಮಜಲು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ತರವಾಡು ಸೇವಾ ಕಾರ್ಯಕರ್ತರಾದ ವಾಲ್ತಾಜೆ ನಾರಾಯಣ ಪೂಜಾರಿ, ವಿಶ್ವನಾಥ ಪೂಜಾರಿ ಕರಂಬಾರು, ಚಂದ್ರಹಾಸ ಪೂಜಾರಿ ಕುರ್ನಾಡು, ಅಶೋಕ ಕರ್ಕೇರ ಮಂಗಳೂರು, ಉಮೇಶ್ ಕಲ್ಲಡ್ಕ, ಮೋಹನ್ ಗುರ್ಜಿನಡ್ಕ, ಉಮೇಶ್ ಬೊಳ್ಳೂರು, ಚೇತನ್ ಕಂಬಳದಡ್ಡ, ಮನೋಹರ, ರಮೇಶ್ ಕುರ್ನಾಡು, ಜನಾರ್ಧನ ಕರಂಬಾರು, ಶ್ರೀಮತಿ ಸರೋಜಿನಿ ಅರ್ಕ, ಜಯರಾಜ್ ವಾಲ್ತಾಜೆ, ಶ್ರೀಮತಿ ತುಳಸಿ ವಾಲ್ತಾಜೆ, ಹರೀಶ್ ಮಂಜಪಾಲು, ನಾರಾಯಣ ಪೂಜಾರಿ ಮಣ್ಣಾಪು ಅವರನ್ನು ಟ್ರಸ್ಟ್ ವತಿಯಿಂದ ಸನ್ಮಾನಿಸಲಾಯಿತು.
ಕವಿ ರಾಜಾರಾಮ ವರ್ಮ ವಿಟ್ಲ ಅರಮನೆ ಅಧ್ಯಕ್ಷತೆಯಲ್ಲಿ ನಡೆದ ಕವಿಗೋಷ್ಠಿಯಲ್ಲಿ ವಿಶ್ವನಾಥ ಕುಲಾಲ್ ಮಿತ್ತೂರು, ಅಶೋಕ್ ಕಡೇಶ್ವಾಲ್ಯ, ರಾಧಾಕೃಷ್ಣ ಎರುಂಬು, ಶ್ರೀಮತಿ ಶಶಿಕಲಾ ಭಾಸ್ಕರ್ ದೈಲಾ ಬಾಕ್ರಬೈಲ್, ಸತೀಶ್ ಬಿಳಿಯೂರು, ಶ್ರೀಮತಿ ರಶ್ಮಿತಾ ಸುರೇಶ್ ಜೋಗಿಬೆಟ್ಟು, ರಮೇಶ್ ಮೆಲ್ಕಾರ್, ನಾಗಿನಿ ವಾಲ್ತಾಜೆ, ಶ್ರೀಮತಿ ಹೇಮ ಸೇಸಪ್ಪ ಪೂಜಾರಿ , ಶ್ರೀಮತಿ ಭವ್ಯ ಜ್ಯೋತಿ, ರಾಧಿಕಾ ಗಿರೀಶ್ ಮಯ್ಯ ಬಿ.ಸಿ.ರೋಡ್ ಸ್ವರಚಿತ ಚುಟುಕು ವಾಚಿಸಿದರು.ಉಮೇಶ್ ಬೆಳ್ಳೂರು ಸ್ವಾಗತಿಸಿ, ವಂದಿಸಿದರು. ಶಿಕ್ಷಕಿ ರೇಖಾ ಪ್ರಶಾಂತ್ ಇರಾ ಕಾರ್ಯಕ್ರಮ ನಿರೂಪಿಸಿದರು.




