ಬಂಟ್ವಾಳ : ತಾಲೂಕಿನಾದ್ಯಂತ ಮನೆ ಮಾತಾಗಿರುವ ಆನಿಯಾ ದರ್ಬಾರ್ ಗ್ರೂಪ್ ಆಫ್ ಹೊಟೇಲ್ಸ್ ಇದರ ಸಹ ಸಂಸ್ಥೆ ಆಲಿಯಾ ಐಸ್ ಕ್ರೀಂ ಪಾರ್ಲರ್ ಬಿ.ಸಿ.ರೋಡಿನ ಸ್ಮಾರ್ಟ್ ಸಿಟಿ ಕಟ್ಟಡದಲ್ಲಿ ಶುಭಾರಂಭಗೊಂಡಿತು.
ಸಯದ್ ಕೆ.ಪಿ.ಎಸ್. ಝೈನುಲ್ ಜಮುಲುಲ್ಲಿಲಿ ತಂಙಳ್ ಕಾಜೂರು ನೂತನ ಐಸ್ ಕ್ರೀಂ ಪಾರ್ಲರನ್ನು ಉದ್ಘಾಟಿಸಿ ದುವಾ ನೇರವೇರಿಸಿದರು.ಸಯ್ಯದ್ ಮಾಡ ತಂಙಳ್, ಇರ್ಷಾದ್ ದಾರಿಮಿ ಮಿತ್ತಬೈಲ್ , ಮಾಜಿ ಶಾಸಕ ಮೊಹಿದ್ದೀನ್ ಬಾವಾ, ಕೇರಳದ ಶಾಸಕ ಸಿಂಧು ಪಿ.ವಿ.ಅನ್ವರ್, ಶಿಗ್ಗಾವಿಯ ಮಾಜಿ ಸಂಸದ ಮಂಜುನಾಥ ಹೊನ್ನೂರು ಭೇಟಿ ನೀಡಿ ಶುಭ ಹಾರೈಸಿದರು.



ಬಂಟ್ವಾಳದ ವಕೀಲ ಅಶ್ವಿನ್ ಕುಮಾರ್ ರೈ ಮಾತನಾಡಿ ಬಿ.ಸಿ.ರೋಡು ಭಾಗದಲ್ಲಿ ಆನಿಯ ದರ್ಬಾರ್ ಹೋಟೇಲ್ ಯಶಸ್ಬಿಯಾಗಿ ನಡೆಯುತ್ತಿದ್ದು ಹೊಸ ಉದ್ಯಮಕ್ಕೆ ಹಂಝ ಬಸ್ತಿಕೋಡಿಯವರು ಮುಂದಾಗಿದ್ದು ಅದು ಯಶಸ್ವಿಯಾಗಲಿ ಎಂದರು.
ಸಜೀಪಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಮಾತನಾಡಿ ಆನಿಯ ದರ್ಬಾರ್ ಬಂಟ್ವಾಳ ತಾಲೂಕಿನಲ್ಲಿ ಯಶಸ್ವಿಯಾಗಿದ್ದು ಐಸ್ ಕ್ರೀಂ ಪಾರ್ಲರ್ ಕೂಡ ಹೆಚ್ಚು ಗ್ರಾಹಕರನ್ನು ತನ್ನತ್ತ ಸೆಳೆಯಲಿ ಎಂದರು.
ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಎಂ. ತುಂಗಪ್ಪ ಬಂಗೇರ ಮಾತನಾಡಿ ಹಂಝ ಬಸ್ತಕೋಡಿಯವರಲ್ಲಿರುವ ಒಳ್ಳೆಯತನ ಅವರನ್ನು ಯಶಸ್ವಿ ಉದ್ಯಮಿಯನ್ನಾಗಿ ಮಾಡಿದೆ ಎಂದರು.
ಹಿದಾಯ ಫೌಂಡೇಶನ್ ಅಧ್ಯಕ್ಷ ಹನೀಫ್ ಹಾಜಿ ಮಾತನಾಡಿ ಎಲ್ಲಾ ಸಮುದಾಯದ ಜನರನ್ನು ಪ್ರೀತಿಸಿ, ಗೌರವಿಸುವ ಗುಣ ಹಂಝ ಅವರಲ್ಲಿದೆ ಎಂದರು. ವಕೀಲ ಕಬೀರ್ ಕೆಮ್ಮಾರ ಮಾತನಾಡಿ ಕೆರೆಯ ನೀರನ್ನು ಕೆರೆಗೆ ಚೆಲ್ಲಿ ಎನ್ನುವಂತೆ ಸಮಾಜದಿಂದ ಪಡೆದುದನ್ನು ಮತ್ತೆ ಸಮಾಜಕ್ಕೆ ನೀಡುವ ಉದಾತ್ತ ಗುಣ ಹಂಝ ಅವರಲ್ಲಿದೆ ಎಂದು ತಿಳಿಸಿದರು.
ಪುರಸಭೆಯ ಮಾಜಿ ಅಧ್ಯಕ್ಷ ಮಹಮ್ಮದ್ ಶರೀಫ್ ಶಾಂತಿಯಂಗಡಿ, ಉದ್ಯಮಿ ಟಿ.ಕೆ. ಬಶೀರ್ ಪರಂಗಿಪೇಟೆಇಕ್ಬಾಲ್ ಪರಂಗಿಪೇಟೆ, ಬಿಜೆಪಿ ಮಂಡಲ ಯುವ ಮೋರ್ಚ ಅಧ್ಯಕ್ಷ ದಿನೇಶ್ ದಂಬೇದಾರ್ , ಹಾಜಿ. ಅಬ್ದುಲ್ ರಹಿಮಾನ್ ಬಸ್ತಿಕೋಡಿ,ಹಾಜಿ ಮುಸ್ತಫಾ ರಹಮಾನಿಯಾ ಸ್ಟೋರ್ , ಡಾ. ಮುಸ್ತಫಾ ಬಸ್ತಿಕೋಡಿ ಮತ್ತಿತರರು ಉಪಸ್ಥಿತರಿದ್ದರು.
ಆನಿಯಾ ದರ್ಬಾರ್ ಗೂಫ್ ಆಫ್ ಹೊಟೇಲ್ಸ್ ನ ಮಾಲಕ ಹಂಝ ಬಸ್ತಿಕೋಡಿ ಸ್ವಾಗತಿಸಿ, ಆಶೀಕ್ ಕುಕ್ಕಾಜೆ ವಂದಿಸಿದರು. ಎಲ್ಲಾ ರೀತಿಯ ಐಸ್ ಕ್ರೀಂ, ದೋಸಾ, ಚಾಟ್ಸ್, ಸ್ನಾಕ್ಸ್, ಫ್ರೂಟ್ ಜ್ಯೂಸ್, ಮಿಲ್ಕ್ ಶೇಖ್, ಫಲೂಡ ಮತ್ತಿತರ ಖಾದ್ಯಗಳು ಇಲ್ಲಿ ಲಭ್ಯವಿದೆ.




