ಕರ್ಪೆ: ಶ್ರೀ ಕುಪ್ಪೆಟ್ಟು ಪಂಜುರ್ಲಿ ಮೂಲಸ್ಥಾನ ಕುಪ್ಪೆಟ್ಟು ಬರ್ಕೆ, ಕರ್ಪೆ ಗ್ರಾಮ, ಬಂಟ್ವಾಳ ತಾಲೂಕು ಇಲ್ಲಿನ ನೂತನವಾಗಿ ನಿರ್ಮಿಸಲಾದ ದೈವಸ್ಥಾನದ ಪ್ರತಿಷ್ಠಾಪನೆ ಮಹೋತ್ಸವವು ದಿನಾಂಕ 18-02-2025 ರಿಂದ 22-02-2025 ತನಕ ಜರಗಳಿದ್ದು ಈ ಬಗ್ಗೆ ಊರ -ಪರವೂರ ದಿಂದ ಸಂಗ್ರಹಣೆಗೊಂಡ ಹಸಿರು ಹೊರೆಕಾಣಿಕೆಯನ್ನು ಪೆಬ್ರವರಿ 16 ಆದಿತ್ಯವಾರ ದಂದು ಸಂಜೆ 3 ಗಂಟೆಗೆ ಸರಿಯಾಗಿ ಸಂಗಬೆಟ್ಟು ಶ್ರೀ ವೀರಭದ್ರ ಮಹಮ್ಮಾಯಿ ದೇವಸ್ಥಾನದ ವಠಾರದಿಂದ ಹೊರಡುವ ಸಲುವಾಗಿ ಹೊರೆಕಾಣಿಕೆ ಹೊರಡುವ ಸ್ಥಳದಲ್ಲಿ ಸಕಲ ವ್ಯವಸ್ಥೆ ಮಾಡಿ ಸಂಪೂರ್ಣ ಸಹಕಾರ ಬಯಸಿ ವೀರಭದ್ರ ದೇವಸ್ಥಾನದ ಆಡಳಿತ ಮಂಡಳಿಯವರಲ್ಲಿ ವಿನಂತಿ ಮಾಡಲಾಯಿತು.
ಕುಪ್ಪೆಟ್ಟು ವತಿಯಿಂದ ಮನವಿ ಪತ್ರ ಹಾಗೂ ಆಮಂತ್ರಣವನ್ನು *ಪಣಂಬೂರು ಶ್ರೀ ವೀರಭದ್ರ ಸ್ವಾಮಿ ಮಹಮ್ಮಾಯೀ ದೇವಸ್ಥಾನ ಸಂಗಬೆಟ್ಟು. ಇಲ್ಲಿಯ ಗುರಿಕಾರಾದ ಚಂದ್ರಹಾಸ ಶೆಟ್ಟಿಗಾರ್ ಇವರ ಮೂಲಕ ಇತರ ಗುರಿಕಾರರ ಸಮ್ಮುಖದಲ್ಲಿ ನಿಡಲಾಯಿತು. ಈ
ಸಂದರ್ಭದಲ್ಲಿ ಕುಪ್ಪೆಟ್ಟು ಪಂಜುರ್ಲಿ ಆಡಳಿತ ಸಮಿತಿಯ ಅಧ್ಯಕ್ಷರಾದ ಹರೀಶ್ ಸನಿಲ್ ಕುಪ್ಪೆಟ್ಟು, ಕೋಶಧಿಕಾರಿ ಜಯ ಪೂಜಾರಿ ಕುಪ್ಪೆಟ್ಟ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಪ್ರಭಾಕರ ಪ್ರಭು, ಪ್ರಧಾನ ಕಾರ್ಯದರ್ಶಿ ನವೀನ್ ಪೂಜಾರಿ ಹೊಸ ಹೊಕ್ಲು ಉಪಾಧ್ಯಕ್ಷ ವಾಮನ ಬುನ್ನಾನ್ ಕುಂಟಾಲಗುಡ್ಡೆ, ಪ್ರತಿಷ್ಠ ಮಹೋತ್ಸವ ಸಮಿತಿಉಪಾಧ್ಯಕ್ಷ ಸತೀಶ್ ಪೂಜಾರಿ ಹಲಕ್ಕೆ ಪ್ರಧಾನ ಕಾರ್ಯದರ್ಶಿ ರತ್ನಾಕರ್ ಪೂಜಾರಿ ಮದಂಗೋಡಿ,, ಸದಸ್ಯರಾದ ಮಹಾಬಲ ಪೂಜಾರಿ ಮದಂಗೋಡಿ, ಅನುಷ್ ಅಡಂಗಾಜೆ,ವೀರಭದ್ರ ದೇವಸ್ಥಾನದ ಇನ್ನಿತರ ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.
ಪ್ರಚಾರ ಸಮಿತಿ ಪ್ರಧಾನ ಸಂಚಾಲಕರಾದ ದಿನೇಶ್ ಸುವರ್ಣ ರಾಯಿ ಕುಪ್ಪೆಟ್ಟು ಪಂಜುರ್ಲಿ ದೈವದ ಇತಿಹಾಸದ ಪ್ರಸ್ತಾವನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು.




