ಬಂಟ್ವಾಳ: ಬಂಟ್ವಾಳ ತಾಲೂಕಿನ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಸಿದ್ದಕಟ್ಟೆ–ಕರ್ಪೆಯ ಶ್ರೀ ಕ್ಷೇತ್ರ ಮಾಡದಬೆಟ್ಟದಲ್ಲಿ ಭಕ್ತಿ, ಸಂಪ್ರದಾಯ ಹಾಗೂ ದೈವಾನುಗ್ರಹದ ಸಾನ್ನಿಧ್ಯದಲ್ಲಿ ಜೂನ್ 19ರಂದು ಶ್ರೀ ಧರ್ಮ ಅರಸು ಉಳ್ಳಾಯ ಹಾಗೂ ಶ್ರೀ ಕೊಡಮಣಿತ್ತಾಯ ದೈವಗಳ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಶಿಲಾನ್ಯಾಸ ಕಾರ್ಯಕ್ರಮ ಭಕ್ತಿಭಾವದಿಂದ ನೆರವೇರಿತು.

ಬೆಳಿಗ್ಗೆ 10:09ರ ಶುಭ ಮುಹೂರ್ತದಲ್ಲಿ ಕ್ಷೇತ್ರದ ಆಸ್ರಣ್ಣರಾದ ಐ. ಕೃಷ್ಣ ಅಸ್ರಣ್ಣ ಅವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿಸಲಾಯಿತು.
ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ದುರ್ಗಾದಾಸ್ ಶೆಟ್ಟಿ ಮಾವಂತೂರು ಹಾಗೂ ಆಡಳಿತ ಸಮಿತಿಯ ಅಧ್ಯಕ್ಷ ಕೆ. ಗಣೇಶ್ ನಾಯಕ್ ಕಾರ್ಯಕ್ರಮದ ನೇತೃತ್ವ ವಹಿಸಿದರು.

ಕಾರ್ಯಕ್ರಮದಲ್ಲಿ ಪ್ರಶಾಂತ್ ಭಟ್ ಪರನೀರು, ಹರೀಶ್ ಭಟ್ ಪುನ್ಕೇದಡಿ, ರವೀಂದ್ರ ಪ್ರಭು ಅರಮನೆ, ಮಾವಂತೂರು ಶ್ರೀ ಬಲವಂಡಿ ದೈವದ ಪ್ರಧಾನ ಅರ್ಚಕರು ರಾಜರಾಮ್ ಭಟ್, ವಾಸ್ತು ಶಿಲ್ಪಿ ಉಮೇಶ್ ಆಚಾರ್ಯ, ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ಮಾಜಿ ಸಚಿವ ಬಿ. ರಮಾನಾಥ ರೈ, ಪದ್ಮರಾಜ್ ಆರ್. ಪೂಜಾರಿ, ಸತೀಶ್ ಚಂದ್ರ ಸಾಲ್ಯಾನ್, ಭುವನೇಶ್ ಪಚ್ಚಿನಡ್ಕ, ಕಿರಣ್ ಮಂಜಿಲ, ರಶ್ಮಿತ್ ಶೆಟ್ಟಿರಾಯಿ, ಪಡಿವಾಳ್ಸ್ ಹೋಟೆಲ್ ಮಾಲಕ ಹರ್ಷವರ್ಧನ್ ಜೈನ್, ಬಲವಂಡಿ ಮುಕ್ಕಲ್ದಿ ಬಾಲಕೃಷ್ಣ ಶೆಟ್ಟಿ, ಸತೀಶ್ ಪೂಜಾರಿ ಅಲಕ್ಕೆ, ಜಗದೀಶ್ ಆಳ್ವ ಅಗೊಂಡೆ, ರತ್ನಕುಮಾರ್ ಚೌಟ, ದುರ್ಗಾದಾಸ್ ಶೆಟ್ಟಿ ಕರೆಂಕಿಜೆ, ಸಂದೇಶ್ ಶೆಟ್ಟಿ ಪೊಡುಂಬ, ಕೊಡಮಣಿತ್ತಾಯ ಮುಕ್ಕಾಲ್ದಿ ನಾರಾಯಣ ಶೆಟ್ಟಿ ತೋಡಾರು, ಸತೀಶ್ ಪೂಜಾರಿ ಕಾಂಜಾರಕೋಡಿ, ಲಕ್ಷೀಧರ್ ಶೆಟ್ಟಿ ಅರಳ, ಪ್ರಸನ್ನ ಶೆಟ್ಟಿ ಅರಳ, ಕಿಶೋರ್ ಕುಮಾರ್ ಅರಳ, ವಸಂತ ಅನ್ನಲಿಕೆ, ಜಗದೀಶ್ ಕೊಯಿಲ, ಜಯಕರ ಶೆಟ್ಟಿ ಪರನೀರ್, ಶಿವಾನಂದ್ ರೈ ಸಿದ್ದಕಟ್ಟೆ, ಮೈಕಲ್ ಡಿ’ಕೊಸ್ತಾ, ದಿನೇಶ್ ಶೆಟ್ಟಿಗಾರ್ ಸಿದ್ದಕಟ್ಟೆ, ಚಂದ್ರಶೇಖರ್ ಶೆಟ್ಟಿ ಅರಳ ಸೇರಿದಂತೆ ಅನೇಕ ಭಕ್ತರು ಹಾಗೂ ಊರಿನ ಸಮಸ್ತರು ಭಾಗವಹಿಸಿದರು.

ಸ್ಥಳದಾನಿಗಳಾದ ಕೆ. ಬೋಜ ಮತ್ತು ಸಹೋದರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಜೀರ್ಣೋದ್ಧಾರ ಕಾರ್ಯಕ್ಕೆ ತಮ್ಮ ಸಹಕಾರ ಸೂಚಿಸಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿ ನೆರವೇರಲಿ ಎಂದು ಭಕ್ತರು ಪ್ರಾರ್ಥಿಸಿದರು.


