Breaking
19 Sep 2026, Sat

ವಿದ್ಯಾನಿಕೇತನ ವಿದ್ಯಾಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆ ಆಚರಣೆ

ಬಂಟ್ವಾಳ: ಅಮ್ಟಾಡಿಯ ವಿದ್ಯಾನಿಕೇತನ ವಿದ್ಯಾಸಂಸ್ಥೆಯಲ್ಲಿ ವಿಶ್ವ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಸಂಸ್ಥೆಯ ಆಡಳಿತ ಟ್ರಸ್ಟಿ ಕಿರಣ್ ಎಸ್. ಬಾಳಿಗಾ ಉದ್ಘಾಟಿಸಿ ಶುಭಹಾರೈಸಿದರು.

ಈ ಸಂದರ್ಭದಲ್ಲಿ ಪಿಟಿಎ ಅಧ್ಯಕ್ಷ ಕೆ. ರಾಜೀವ್ ಯೋಗದ ಮಹತ್ವ ತಿಳಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಹೇಮಲತಾ, ಮಾಂಟೆಸ್ಸೋರಿ ಶಿಕ್ಷಣ ವಿಭಾಗದ ಮುಖ್ಯಶಿಕ್ಷಕಿ ಸವಿತಾ ಕಿರಣ್ ಹಾಗೂ ಸುಜಾತ ಬಾಳೆಹೊಳೆ ಉಪಸ್ಥಿತರಿದ್ದರು.

ವಿದ್ಯಾಕೇಂದ್ರದ ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹೊರಾಂಗಣದಲ್ಲಿ ಸೇರಿ ಸಾಮೂಹಿಕ ಸೂರ್ಯನಮಸ್ಕಾರ, ಯೋಗಾಸನ ಹಾಗೂ ಪ್ರಾಣಾಯಾಮ ಪ್ರದರ್ಶನ ನಡೆಸಿದರು. ಶಾರೀರಿಕ ಶಿಕ್ಷಕಿ ವೀಣಾ ಕುಮಾರಿ ಯೋಗ ತರಬೇತಿ ನೀಡಿ ಕಾರ್ಯಕ್ರಮವನ್ನು ಸಂಯೋಜಿಸಿದರು.

Leave a Reply

Your email address will not be published. Required fields are marked *