Breaking
4 Aug 2026, Tue

ಭತ್ತ ನೆಡುವ ಅಂಗವಾಗಿ ಜೂ.28ರಂದು ಹೆಸರುಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳು – ಆಮಂತ್ರಣ ಪತ್ರ ಬಿಡುಗಡೆ

ಸಜೀಪಮೂಡ: ಶ್ರೀ ಬಾಲ ಗಣಪತಿ ದೇವಸ್ಥಾನ, ಅನ್ನಪಾಡಿ ಸಜೀಪಮೂಡ ಶ್ರೀ ಕ್ಷೇತ್ರದ ಗದ್ದೆಯಲ್ಲಿ ಭತ್ತ ಬೆಳೆಯುವ ಕಾರ್ಯಕ್ರಮದ ಅಂಗವಾಗಿ ಜೂನ್ 28, 2026ರಂದು (ಭಾನುವಾರ) ಸಾಮೂಹಿಕವಾಗಿ ಮಕ್ಕಳಿಗೆ, ಮಹಿಳೆಯರಿಗೆ ಹಾಗೂ ಪುರುಷರಿಗೆ ಹೆಸರುಗದ್ದೆಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮದ ಆಮಂತ್ರಣ ಪತ್ರವನ್ನು ಗುರುವಾರ ಶ್ರೀ ಕ್ಷೇತ್ರದಲ್ಲಿ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರು ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ದೇವಾಲಯದ ಅರ್ಚಕ ಶ್ರೀನಿವಾಸ ಶಿವ ತಾಯ, ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ಯಶವಂತ ಪೂಜಾರಿ ದೇರಾಜೆಗುತ್ತು, ಪಂಚಾಯತ್ ಮಾಜಿ ಅಧ್ಯಕ್ಷ ವಿಶ್ವನಾಥ ಬೆಲ್ಚಾಡ, ಲಿಂಗಪ್ಪ ದೋಟ, ಸುರೇಶ್ ಬಂಗೇರ, ಪಂಚಾಯತ್ ಮಾಜಿ ಸದಸ್ಯ ಭಾಸ್ಕರ ಕಂಪದಕೋಡಿ, ಜಯಪ್ರಕಾಶ್ ಪೆರ್ವ, ಪುಷ್ಪರಾಜ್ ಸಾನದ ಮನೆ, ಪ್ರಶಾಂತ್ ಬೊಳ್ಳಾಯಿ, ಪ್ರಮೋದ್ ಸಾನದ ಮನೆ, ರಾಜೇಶ್, ಕುಶೇಶ್, ಗಣೇಶ್ ಚೇಳೂರು, ಸಂತೋಷ್ ಬೊಳ್ಳಾಯಿ ಹಾಗೂ ದೇವಾಲಯದ ಪ್ರಬಂಧಕ ಪ್ರಶಾಂತ್ ಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *