Breaking
25 Aug 2026, Tue

ಪುರ್ಲಿಪಾಡಿಯಲ್ಲಿ ‘ಗೌಜಿ ಗಮ್ಮತ್-2026’; ಸಾಧಕರಿಗೆ ಸನ್ಮಾನ

ಕಲ್ಲಡ್ಕ: ಸಂಸ್ಕಾರಯುತ ಜೀವನ ಬೆಳೆಸುವುದರ ಜೊತೆಗೆ ಗ್ರಾಮ ವ್ಯಾಪ್ತಿಯ ಜನರ ಕಷ್ಟ-ಸುಖಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸುರಕ್ಷಾ ಸಂಗಮ (ರಿ.) ಪುರ್ಲಿಪಾಡಿ ನಡೆಸುತ್ತಿರುವ ಕಾರ್ಯಕ್ರಮಗಳು ಮಾದರಿಯಾಗಿವೆ ಎಂದು ಬಿಜೆಪಿ ಯುವ ಮೋರ್ಚಾ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ ಸಂದೇಶ್ ಶೆಟ್ಟಿ ಅರೆಬೆಟ್ಟು ಹೇಳಿದರು.

ಅವರು ಸುರಕ್ಷಾ ಸಂಗಮ (ರಿ.) ಪುರ್ಲಿಪಾಡಿ ಆಶ್ರಯದಲ್ಲಿ ಆ.23ರಂದು ಕಲ್ಲಡ್ಕ ಮರಾಠಿ ಭವನದಲ್ಲಿ ನಡೆದ ‘ಗೌಜಿ ಗಮ್ಮತ್-2026’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಸಂಘದ ಅಧ್ಯಕ್ಷ ಜಯಪ್ರಶಾಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ದೈವ ಚಾಕರಿದಾರ ಯೋಗೀಶ್ ಸುವರ್ಣ, ಗ್ರಾಮ ಗೌರವಕ್ಕೆ ಪಾತ್ರರಾದ ನಾಗರತ್ನ ಪುರ್ಲಿಪಾಡಿ ಹಾಗೂ 25 ಬಾರಿ ರಕ್ತದಾನ ಮಾಡಿದ ರಾಜೇಶ್ ಬಿ.ಆರ್. ನಗರ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ರುಕ್ಮಯ ಪೂಜಾರಿ, ಬಿಜೆಪಿ ಬಂಟ್ವಾಳ ತಾಲೂಕು ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್, ಹೊಸಕಟ್ಟ ಕನ್‌ಸ್ಟ್ರಕ್ಷನ್ ಮಾಲೀಕ ಚಿತ್ರಂಜನ್ ಹೊಸಕಟ್ಟ, ಕೃಷಿಕ ಜಯಾನಂದ ಏಳ್ತೀಮಾರು, ಆರ್.ಕೆ. ಡ್ಯಾನ್ಸ್ ಅಕಾಡೆಮಿ ವಿಟ್ಲದ ರಾಜೇಶ್ ವಿಟ್ಲ, ಪ್ರಗತಿಪರ ಕೃಷಿಕ ಜನಾರ್ದನ ಪೂಜಾರಿ ಗೋಳಿಮಾರ್, ಕೆ.ಎಸ್. ಬೇಕರಿ ಮಾಲೀಕ ನವಾಜ್ ಹಾಗೂ ಕನ್ನಡ ಶಾರದಾ ಪೂಜಾ ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.

ಆರಾಧ್ಯ ಪ್ರಾರ್ಥಿಸಿದರು. ಸಂಘದ ಗೌರವ ಸಲಹೆಗಾರ ಯತಿನ್ ಕುಮಾರ್ ಏಳ್ತೀಮಾರು ಸ್ವಾಗತಿಸಿದರು. ಗೌರವ ಸಲಹೆಗಾರ ವೆಂಕಟ್ರಾಯ ಪ್ರಭು ಪ್ರಾಸ್ತಾವಿಕವಾಗಿ ಮಾತನಾಡಿದರು. ಸುರಕ್ಷಾ ಮಹಿಳಾ ಮಂಡಳಿ ಅಧ್ಯಕ್ಷೆ ಉಮಾವತಿ ವಂದಿಸಿದರು. ರಾಜೇಶ್ ಕೊಟ್ಟಾರಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *