ಬಂಟ್ವಾಳ: ಸಜಿಪ ಮುನ್ನೂರು ಗ್ರಾಮದ ಮರ್ತಾಜೆ ಗುತ್ತಿನ ಶ್ರೀ ಮಲರಾಯ ಗ್ರಾಮ ಸಮಿತಿ ವತಿಯಿಂದ ಆಯೋಜಿಸಿದ್ದ ‘ಮರ್ತಾಜೆ ಮಣ್ಣ್ ದ ಕೆಸರ್ದ ಗೊಬ್ಬು’ ಪಂದ್ಯಾಟ ಆ.23ರಂದು ಮಲರಾಯ ದೈವಸ್ಥಾನದಲ್ಲಿ ಪ್ರಾರ್ಥನೆಯೊಂದಿಗೆ ಆರಂಭಗೊಂಡು ಬಳಿಕ ಮಲರಾಯ ಚಾವಡಿ ವೇದಿಕೆಯಲ್ಲಿ ಉದ್ಘಾಟನೆಗೊಂಡಿತು.

ಸಾಧ್ವಿ ಬಂಗೇರ ತಂಡದೊಂದಿಗೆ ಪ್ರಾರ್ಥನೆ ನೆರವೇರಿಸಿದರು. ಮಲರಾಯ ದೈವಸ್ಥಾನದ ಗಡಿಪ್ರಧಾನ ಸುಕುಮಾರ್ ಬಂಟ್ವಾಳ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀ ಮಹಮ್ಮಾಯಿ ಕ್ಷೇತ್ರ ಕಾರಾಂಬಡೆಯ ಅನುವಂಶಿಕ ಅರ್ಚಕ ಅರುಣ್ ಕುಮಾರ್ ಕಾರ್ಯಕ್ರಮ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ, ಗಂಗಾಧರ್ ಭಂಡಾರಿ ಆಳ್ವಾರ ಪಾಲು, ನಾಲುಕೈತ್ತಾಯ ದೈವಸ್ಥಾನದ ಗಡಿಪ್ರಧಾನ ಸುನೀತ್ ಯಾನೆ ಶಂಕರ ಪೂಜಾರಿ ಕರಂದಾಡಿ, ತುಳುಕೂಟ ಬಂಟ್ವಾಳ ಅಧ್ಯಕ್ಷ ಸುದರ್ಶನ್ ಜೈನ್, ಸುಬ್ರಾಯ ದೇವಸ್ಥಾನ ಮುಂಡೂರು ವ್ಯವಸ್ಥಾಪನ ಸಮಿತಿ ಕಾರ್ಯದರ್ಶಿ ಧನಂಜಯ ಕುಲಾಲ್, ರೈತರ ಸಹಕಾರಿ ಸಂಘ ಪಾಣೆಮಂಗಳೂರು ಅಧ್ಯಕ್ಷ ಜಯಶಂಕರ್ ಬಾಸಿತ್ರಯ, ಕರಾವಳಿ ತರಂಗಿಣಿ ಪತ್ರಿಕೆ ಸಂಪಾದಕಿ ಲಲಿತಾ, ಪ್ರೀತಮ್ ರೈ, ಧರ್ಮಸ್ಥಳ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಾಗೇಶ್ ಮರ್ತಾಜೆ, ಕೆನರಾ ಬ್ಯಾಂಕ್ ಆರ್‌ಎಚ್ ಡಿವಿಜನಲ್ ಮ್ಯಾನೇಜರ್ ಪುರಂದರ ದೇರಾಜೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಂಟ್ವಾಳ ಯೋಜನಾಧಿಕಾರಿ ಜಯಾನಂದ, ಸಮಾಜ ಸೇವಾ ಸಂಘ ಬಂಟ್ವಾಳ ನಿರ್ದೇಶಕರು ಅರುಣ್ ಕುಮಾರ್ ಕುಕ್ಕುದಕಟ್ಟೆ, ಮೂ. ಸೇ. ಸ. ಸಂಘ ಸಜೀಪ ಮುನ್ನೂರು ಅಧ್ಯಕ್ಷರು ಸಂಜೀವ ಪೂಜಾರಿ ಕುಚ್ಚಿ ಗುಡ್ಡೆ, ಲಯನ್ಸ್ ಕ್ಲಬ್ ಬಂಟ್ವಾಳ್ ಅಧ್ಯಕ್ಷರು ಜಯೇಶ್ ಗೋವಿಂದ್ ಎಂ ಆರ್ ಪಿ ಎಲ್, ಕಿಶೋರ್ ಆಚಾರ್ಯ, ಜೆಸಿಐ ಬಂಟ್ವಾಳ್, ಸಜೀಪ ಮುನ್ನೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಪರಮೇಶ್ವರ್, ಬೀಡಿ ಕಂಟ್ರಾಕ್ಟರ್ ಸಂಜೀವ ಪೂಜಾರಿ ಸುಭಾಸ್ ನಗರ, ಕಂಟ್ರಾಕ್ಟರ್ ನಾವೂರ ಸೀತಾರಾಮ ಸಾಲಿಯಾನ್, ಅಮೂಲ್ಯ ಸೇವಾ ಪ್ರತಿಷ್ಟನಾ ಸ್ಥಾಪಕ ಅಧ್ಯಕ್ಷರು ಮುರುಳಿದಾಸ್ ಕುಲಾಲ್, ಮಿತ್ತಕಟ್ಟ ಮಾತ್ರ ಭೂಮಿ ಡೆವಲಪರ್ಸ್ ಮಂಗಳೂರು ನವೀನ್ ಸುವರ್ಣ, ತರವಾಡು ಮನೆ ಮರ್ತಾಜೆ ಗುತ್ತು ಹಿರಿಯರು ಪದ್ಮನಾಭ ನಾರ್ಯ, ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಮಂಗಳೂರು ಮೇಲ್ವಿಚಾರಕರು ಶಿವಲಕ್ಷ್ಮಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗ್ರಾಮದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯದರ್ಶಿ ಶಿವರಾಮ್ ಮರ್ತಾಜೆ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಸಂತೋಷ್ ಮರ್ತಾಜೆ ಧನ್ಯವಾದ ಸಲ್ಲಿಸಿದರು. ಎಚ್.ಕೆ. ನಯನಾಡು ಕಾರ್ಯಕ್ರಮ ನಿರೂಪಿಸಿದರು.




