ವಿಟ್ಲ: ವಿಟ್ಲ ಕೋಟಿಕೆರೆಯಲ್ಲಿ ಈಜಲು ತೆರಳಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಮಂಗಳವಾರ (ಆ.25) ಮುಂಜಾನೆ ನಡೆದಿದೆ.
ಮೃತರನ್ನು ವಿಟ್ಲ ಕಸಬಾ ಗ್ರಾಮದ ಗಾಳಿಹಿತ್ಲು ನಿವಾಸಿ ವೀರಪ್ಪ ಗೌಡ ಅವರ ಪುತ್ರ ಹಾಗೂ ಎಸ್ಸಿಡಿಸಿಸಿ ಬ್ಯಾಂಕ್ ಉದ್ಯೋಗಿ ಲಿತಿನ್ (32) ಎಂದು ಗುರುತಿಸಲಾಗಿದೆ.

ಬೆಳಗಿನ ಜಾವ ಈಜಲು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿದ ಲಿತಿನ್ ಅವರನ್ನು ಸ್ಥಳೀಯರು ಕೂಡಲೇ ಮೇಲಕ್ಕೆತ್ತಿದರು. ಆದರೆ ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.

ಮೃತರು ತಂದೆ, ತಾಯಿ, ಪತ್ನಿ ಹಾಗೂ ಮಗುವನ್ನು ಅಗಲಿದ್ದಾರೆ.



