ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆ ಹಾಗೂ ಉತ್ತಮ ಆಡಳಿತವನ್ನು ಸ್ಮರಿಸುವ ನಿಟ್ಟಿನಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲದ ವತಿಯಿಂದ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಅ.11ರಂದು ಪೌರ ಕಾರ್ಮಿಕರಿಗೆ ಗೌರವ ಸನ್ಮಾನ ಹಾಗೂ ಸ್ವಚ್ಛತಾ ಅಭಿಯಾನ ನಡೆಯಿತು.

ಕುವೆಟ್ಟು ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಹಾಗೂ ಕಾರ್ಯಕ್ರಮದ ಪ್ರಭಾರಿ ಪ್ರದೀಪ್ ಶೆಟ್ಟಿ ಗುರುವಾಯನಕೆರೆ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಬಿಜೆಪಿ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ರತ್ನಾಕರ್ ಬುಣ್ಣನ್, ಪ್ರಧಾನ ಕಾರ್ಯದರ್ಶಿ ವಿಠ್ಠಲ್ ಆಚಾರ್ಯ ಕುವೆಟ್ಟು, ಸುಧೀರ್ ಬಂಡಾರಿ ಕರಿಮಣೇಲು ಸೇರಿದಂತೆ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಜಿಲ್ಲಾ ಮನ್ ಕೀ ಬಾತ್ ಸಂಯೋಜಕರಾದ ಸೀತಾರಾಮ್ ಬೆಳಾಲು, ಜಿಲ್ಲಾ ಎಸ್ಸಿ ಮೋರ್ಚಾ ಉಪಾಧ್ಯಕ್ಷರಾದ ಸಿ.ಕೆ ಚಂದ್ರಕಲಾ, ಕುವೆಟ್ಟು ಶಕ್ತಿ ಕೇಂದ್ರ ಅಧ್ಯಕ್ಷರಾದ ಗಣೇಶ ಕುಲಾಲ್ ಕುವೆಟ್ಟು, ಪ್ರಮುಖರಾದ ಪದ್ಮ ಕುಲಾಲ್ ನಗರ, ವಸಂತ ಶೆಟ್ಟಿ, ಶ್ರೀನಾಥ್, ವಿತೇಶ್, ನಿಮಿತ್, ದಾಮೋದರ್, ವಸಂತ, ಕಿರಣ್,ಪ್ರಮೀಳಾ.ಎಸ್, ಅನಿತಾ.ಕೆ ಕುಕ್ಕೆಡಿ, ಸುಮಿತ್ರ ವಾಮನ, ಸೂರ್ಯ ಪ್ರಸಾದ್, ರಾಜೇಶ್ ಸುದೇಕ್ಕಾರ್, ರಮೇಶ್ ಬರಾಯ, ಸನತ್, ರಮೇಶ್, ಸೃಜನ್, ಮನೀಶ್, ವಿಕಾಸ್, ಅರ್ಪಿತಾ, ರವೀಂದ್ರ, ಪ್ರಶಾಂತ್ ಸೇರಿದಂತೆ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

ಬೆಳ್ತಂಗಡಿ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ಕೈಗೊಳ್ಳುವ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲಾಯಿತು. ಪೌರ ಕಾರ್ಮಿಕರನ್ನು ಸೇನಾನಿಗಳಂತೆ ಗೌರವಿಸಿ ಸನ್ಮಾನಿಸಲಾಯಿತು.


