Breaking
12 Oct 2026, Mon

ಬಂಟರ ಸಂಘದಿಂದ ರೂ 60 ಲಕ್ಷ ವಿದ್ಯಾರ್ಥಿವೇತನ ವಿತರಣೆ: ಕಷ್ಟದಲ್ಲಿ ಕಲಿತರೆ ಬದುಕು ಸುಂದರ- ಬಾಲಕೃಷ್ಣ ರೈ

ಬಂಟ್ವಾಳ: ಸಮಾಜದಲ್ಲಿ ಎಲ್ಲರನ್ನೂ ಮೇಲೆತ್ತಿಕೊಂಡು ಮುನ್ನಡೆಸುವ ಗುಣ ಬಂಟ ಸಮುದಾಯದಲ್ಲಿ ಬೆಳೆದು ಬಂದಿದೆ. ಕಷ್ಟದಲ್ಲಿ ಕಲಿತ ಅಪಾರ ಮಂದಿ ಉನ್ನತ ಮಟ್ಟದ ಸಾಧನೆ ಮಾಡುತ್ತಿರುವ ಆದರ್ಶ ವ್ಯಕ್ತಿಗಳನ್ನು ಯುವಜನತೆ ಮಾದರಿಯಾಗಿಟ್ಟು ಮುನ್ನಡೆಯಬೇಕು ಎಂದು ಮುಂಬೈ ಶ್ರೀ ಪ್ಯಾಕ್ ಕಂಟೈನರ್ಸ್ ಆಡಳಿತ ನಿರ್ದೇಶಕ ಬಾಲಕೃಷ್ಣ ಎಂ.ರೈ ಹೇಳಿದ್ದಾರೆ.


ಇಲ್ಲಿನ ಬಂಟರ ಸಂಘ ಮತ್ತು ಮುಂಬೈ ಆಲ್ ಕಾರ್ಗೋ ಲಾಜಿಸ್ಟಿಕ್ಸ್ ಸಂಸ್ಥೆ ಮುಖ್ಯಸ್ಥ ಶಶಿಕಿರಣ್ ಶೆಟ್ಟಿ ಇವರ ಸಹಭಾಗಿತ್ವದಲ್ಲಿ ತುಂಬೆ ವಳವೂರು ಬಂಟರ ಭವನದಲ್ಲಿ ಭಾನುವಾರ ನಡೆದ ಎಲ್ಲಾ ಸಮಾಜದ ಅರ್ಹ ವಿದ್ಯಾರ್ಥಿಗಳಿಗೆ ರೂ 60 ಲಕ್ಷ ಮೊತ್ತದ ವಿದ್ಯಾರ್ಥಿ ವೇತನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಸಂಘದ ಅಧ್ಯಕ್ಷ ಜಗನ್ನಾಥ ಚೌಟ ಬದಿಗುಡ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಂಬೈ ಆಲ್ ಕಾರ್ಗೋ ಲಾಜಿಸ್ಟಿಕ್ಸ್ ಸಂಸ್ಥೆ ಪ್ರಧಾನ ವ್ಯವಸ್ಥಾಪಕ ಡಾ.ನೀಲ್ ರತನ್ ಶೆಂಡೆ ಮತ್ತು ಮುಂಬೈ ಪ್ರೊಡಕ್ಟ್ ಲೋಕಸ್ ನಿರ್ದೇಶಕ ಗೌರವ್ ಶೆಟ್ಟಿ ಕೊಲ್ಯ ವಿಟ್ಲ ಇವರು ಶುಭ ಹಾರೈಸಿದರು.


ಸಂಘದ ಕಾರ್ಯದರ್ಶಿ ಸದಾನಂದ ಆಳ್ವ ಕಂಪ, ಕೋಶಾಧಿಕಾರಿ ಲೋಕೇಶ್ ಶೆಟ್ಟಿ ಕುಳ, ಜತೆ ಕಾರ್ಯದರ್ಶಿ ಶಿವಪ್ರಸಾದ್ ಶೆಟ್ಟಿ ಸಜೀಪ, ಜತೆ ಕೋಶಾಧಿಕಾರಿ ಶ್ರೀವಿದ್ಯಾ ಎ.ರೈ ಬಿ.ಸಿ ರೋಡ್, ಮಹಿಳಾ ವಿಭಾಗ ಅಧ್ಯಕ್ಷೆ ಸುಜಾತ ಪಿ.ರೈ ಕಲ್ಲಡ್ಕ, ಯುವ ವಿಭಾಗ ಅಧ್ಯಕ್ಷ ಗೋಕುಲ್ ಭಂಡಾರಿ ಬಿಜಂದಾರುಗುತ್ತು, ಸಮಿತಿ ಸಂಚಾಲಕ ಉಮಾನಾಥ ರೈ ಮೇರಾವು ಮತ್ತಿತರರು ಇದ್ದರು. ಶಾಸಕ ರಾಜೇಶ ನಾಯ್ಕ್ ಉಳಿಪಾಡಿ ಭೇಟಿ ನೀಡಿದರು.


ಸಂಘದ ಉಪಾಧ್ಯಕ್ಷ ಸುಜೀರ್ ಗುತ್ತು ಐತಪ್ಪ ಆಳ್ವ ಸ್ವಾಗತಿಸಿ, ಮಾಜಿ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಇದೇ ವೇಳೆ ಸಾಧಕ ವಿದ್ಯಾರ್ಥಿಗಳಾದ ಗಗನ್ ಆಳ್ವ ದಲಂದಿಲ, ಕ್ರಿಷ್ಮ ಶೆಟ್ಟಿ ಮೊಡಂಕಾಪು, ತೀರ್ಥ ಶೆಟ್ಟಿ ಸರಪಾಡಿ, ಪ್ರಾಪ್ತಿ ಆಳ್ವ, ಪೃಥ್ವಿ ಎನ್.ಶೆಟ್ಟಿ, ಪ್ರಕೃತಿ ಶೆಟ್ಟಿ ಮಾಣಿ, ಕ್ಷಮಾ ಎಸ್.ಪಿ., ಶ್ರೀಕೃಷ್ಣ ಅಡ್ಯನಡ್ಕ, ದೀಕ್ಷಾ ಜಿ.ಸುವರ್ಣ, ಪ್ರಥಮ್ ಕನ್ಯಾನ ಇವರಿಗೆ ಪ್ರತಿಭಾ ಪುರಸ್ಕಾರ ಮತ್ತು ಸಿಎ ವಿಶ್ವೇಶ್ವರ್ ಇವರನ್ನು ಅಭಿನಂದಿಸಲಾಯಿತು.
ತೃಪ್ತಿ ರೈ ಫರಂಗಿಪೇಟೆ ಪ್ರಾರ್ಥಿಸಿದರು. ವಿದ್ಯಾ ಎಸ್. ಶೆಟ್ಟಿ ಬಿ.ಸಿ ರೋಡ್, ಲೋಕೇಶ್ ಶೆಟ್ಟಿ ಕುಳ, ಶಿವಾನಿ ಬಿ.ಶೆಟ್ಟಿ ಸಾಧಕರನ್ನು ಪರಿಚಯಿಸಿದರು. ಬಾಲಕೃಷ್ಣ ಆಳ್ವ ಕೊಡಾಜೆ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *