Breaking
13 Oct 2026, Tue

ಮೆಲ್ಕಾರ್‌ನಲ್ಲಿ ಶ್ರೀ ಶಂಕರ ಪತ್ತಿನ ಸಹಕಾರ ಸಂಘದ ಸ್ಥಳಾಂತರಿತ ಪ್ರಧಾನ ಕಚೇರಿ ಉದ್ಘಾಟನೆ

ಬಂಟ್ವಾಳ: ಸಹಕಾರ ತತ್ವದಡಿ ಆರಂಭಗೊಂಡ ಸಹಕಾರ ಸಂಘಗಳು ಗ್ರಾಹಕರ ವಿಶ್ವಾಸ ಗಳಿಸಿ, ಪರಸ್ಪರ ಸಹಕಾರದೊಂದಿಗೆ ಮುನ್ನಡೆದಾಗ ಯಶಸ್ಸು ಸಾಧಿಸಲು ಸಾಧ್ಯ ಎಂದು ಎಡನೀರು ಮಠದ ಸಚ್ಚಿದಾನಂದ ಭಾರತೀ ಮಹಾಸ್ವಾಮೀಜಿ ಹೇಳಿದರು.

ಮೆಲ್ಕಾರ್‌ನ ಸಾರಾ ಆರ್ಕೇಡ್‌ನ ಪ್ರಥಮ ಮಹಡಿಯಲ್ಲಿ ಸೋಮವಾರ ಆರಂಭಗೊಂಡ ಶ್ರೀ ಶಂಕರ ಪತ್ತಿನ ಸಹಕಾರ ಸಂಘದ ಸ್ಥಳಾಂತರಿತ ಪ್ರಧಾನ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಂಘದ ಅಧ್ಯಕ್ಷ ಕೈಯೂರು ನಾರಾಯಣ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಾಸಕ ರಾಜೇಶ ನಾಯ್ಕ್ ಉಳಿಪಾಡಿ ಭದ್ರತಾ ಕೊಠಡಿಯನ್ನು ಉದ್ಘಾಟಿಸಿದರು. ಮಾಜಿ ಸಚಿವ ಬಿ. ರಮಾನಾಥ ರೈ ವಿಶೇಷ ಠೇವಣಿಗಳನ್ನು ಬಿಡುಗಡೆಗೊಳಿಸಿದರು. ಉದ್ಯಮಿ ಸಂಜೀವ ಪೂಜಾರಿ ಗುರುಕೃಪಾ ಶುಭ ಹಾರೈಸಿದರು.

ಉದ್ಯಮಿ ಚಂದ್ರಹಾಸ ಶೆಟ್ಟಿ ರಂಗೋಲಿ, ಎಂ.ಎನ್. ಕುಮಾರ್ ಮೆಲ್ಕಾರ್, ಬಿ. ಯೋಗೀಶ್ ನಾಯಕ್, ಸಹಕಾರ ಅಭಿವೃದ್ಧಿ ಅಧಿಕಾರಿ ಡಾ. ಜ್ಯೋತಿ ಡಿ., ಜಿಲ್ಲಾ ಧಾರ್ಮಿಕ ಪರಿಷತ್ತಿನ ಸದಸ್ಯ ದೇವಪ್ಪ ಕುಲಾಲ್ ಪಂಜಿಕಲ್ಲು ಹಾಗೂ ಸಂಜೀವ ನಾಯ್ಕ್ ನಿರಬೈಲು ಉಪಸ್ಥಿತರಿದ್ದರು.

ಸಂಘದ ಉಪಾಧ್ಯಕ್ಷ ಜಯಾನಂದ ಪೆರಾಜೆ ಸ್ವಾಗತಿಸಿದರು. ನಿರ್ದೇಶಕ ಅನಂತ ಪ್ರಭು ವಂದಿಸಿದರು. ನಿರ್ದೇಶಕ ರವೀಂದ್ರ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು. ಕೀರ್ತನಾ ಹೊಳ್ಳ ಪ್ರಾರ್ಥಿಸಿದರು.

ನಿರ್ದೇಶಕರಾದ ವೇದವ್ಯಾಸ ರಾಮಕುಂಜ, ಎಂ. ಈಶ್ವರ ಭಟ್, ಅನಂತ ಪ್ರಭು, ಜಯರಾಮ ಪೂಜಾರಿ, ಜಯರಾಮ ಶೇಖ್, ಮುರಳೀಧರ ರಾವ್, ಭವಾನಿಶಂಕರ ಶೆಟ್ಟಿ, ರಮಾ ಎಸ್. ಭಂಡಾರಿ, ರಾಜೀವಿ ಎನ್., ರಾಕೋಡಿ ಈಶ್ವರ ಭಟ್ ಹಾಗೂ ಸಿಇಒ ಭವ್ಯ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *