Breaking
25 Aug 2026, Tue

ಹಿರಿಯ ಪತ್ರಕರ್ತ ಹರೀಶ್ ಮಾಂಬಾಡಿಗೆ ‘ಸಾಧನಾಶ್ರೀ’ ಪ್ರಶಸ್ತಿ

ಮಡಂತ್ಯಾರು: ಕಲಾಸಭಾಂಗಣದಲ್ಲಿ ಭಾನುವಾರ ಮಡಂತ್ಯಾರು ಜೇಸಿಐ ವತಿಯಿಂದ ಆಯೋಜಿಸಿದ್ದ ಜೇಸಿಐ ವಲಯ 15ರ ‘ಮೃದಿನಿ’ ವ್ಯವಹಾರ, ಬೆಳವಣಿಗೆ ಮತ್ತು ಅಭಿವೃದ್ಧಿ ಸಮ್ಮೇಳನ-2026ರಲ್ಲಿ ಜೆಸಿಐ ಜೋಡುಮಾರ್ಗ ನೇತ್ರಾವತಿ ಸದಸ್ಯ ಹಾಗೂ ಹಿರಿಯ ಪತ್ರಕರ್ತ ಹರೀಶ್ ಮಾಂಬಾಡಿ ಅವರಿಗೆ ‘ಸಾಧನಾಶ್ರೀ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಮಾಜ ಹಾಗೂ ಪತ್ರಿಕೋದ್ಯಮ ಕ್ಷೇತ್ರದಲ್ಲಿನ ಸೇವೆಯನ್ನು ಪರಿಗಣಿಸಿ ಹರೀಶ್ ಮಾಂಬಾಡಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಸಂದರ್ಭದಲ್ಲಿ ಜೇಸಿಐ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ, ವಲಯ ಪದಾಧಿಕಾರಿಗಳಾದ ರಂಜಿತ್ ಎಚ್.ಡಿ., ಸುಹಾಸ್ ಮರಿಕೆ, ಗಾಯತ್ರಿ ಲೋಕೇಶ್, ವಿಘ್ನೇಶ್ ಪ್ರಸಾದ್ ರಾವ್, ಕಾಶಿನಾಥ್ ಗೋಗಟೆ, ಜೋಡುಮಾರ್ಗ ನೇತ್ರಾವತಿ ಜೇಸಿಐ ಪೂರ್ವಾಧ್ಯಕ್ಷ ಪಿ. ಮಹಮ್ಮದ್, ಜೇಸಿಐ ಜೋಡುಮಾರ್ಗ ನೇತ್ರಾವತಿ ಅಧ್ಯಕ್ಷೆ ಕೀರ್ತಿ ಸತೀಶ್, ಮಡಂತ್ಯಾರು ಜೇಸಿಐ ಅಧ್ಯಕ್ಷೆ ಸಾಯಿಸುಮ ನಾವಡ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *