Breaking
12 Oct 2026, Mon

ಮುಂಡೂರು ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಅ.11ರಿಂದ 26ನೇ ವರ್ಷದ ನವರಾತ್ರಿ ಉತ್ಸವ

ಬಂದಾರು: ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಶ್ರೀ ಕ್ಷೇತ್ರ ಮುಂಡೂರು ಚಾಮುಂಡೇಶ್ವರಿ ದೇವಸ್ಥಾನದಲ್ಲಿ 26ನೇ ವರ್ಷದ ನವರಾತ್ರಿ ಉತ್ಸವವು ಅ.11ರಿಂದ ಅ.20ರವರೆಗೆ ವಿಜೃಂಭಣೆಯಿಂದ ನಡೆಯಲಿದೆ.

ನವರಾತ್ರಿ ಉತ್ಸವದ ಅಂಗವಾಗಿ ಪ್ರತಿದಿನ ರಾತ್ರಿ 7ರಿಂದ 8ರವರೆಗೆ ಭಜನೆ, ಅಮ್ಮನವರಿಗೆ ವಿಶೇಷ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

ಅ.15ರಂದು ಬೆಳಗ್ಗೆ ಚಂಡಿಕಾಹೋಮ ನಡೆಯಲಿದ್ದು, ಅ.20ರಂದು ಬೆಳಗ್ಗೆ 9.30ಕ್ಕೆ ವಾಹನ ಪೂಜೆ, ಮಧ್ಯಾಹ್ನ ಮಹಾಪೂಜೆ ಹಾಗೂ ಮಹಾ ಅನ್ನಸಂತರ್ಪಣೆ ನೆರವೇರಲಿದೆ.

ಉತ್ಸವದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಯ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನದ ಧರ್ಮದರ್ಶಿ ಶ್ರೀ ಎಂ. ಆನಂದ ಗೌಡ ಹಾಗೂ ಊರು-ಪರವೂರಿನ ಭಕ್ತವೃಂದ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Leave a Reply

Your email address will not be published. Required fields are marked *