Breaking
8 Sep 2026, Tue

SBI ಎಟಿಎಂ ಧ್ವಂಸ ಪ್ರಕರಣ: ಸಿಸಿಟಿವಿ ಆಧಾರದಲ್ಲಿ ಆರೋಪಿ ಬಂಧನ

ಹೂವಿನಹಡಗಲಿ ಪಟ್ಟಣದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಎಟಿಎಂ ಕೇಂದ್ರದಲ್ಲಿ ಶನಿವಾರ ನಸುಕಿನ ವೇಳೆ ದುಷ್ಕರ್ಮಿಯೊಬ್ಬ ಎಟಿಎಂ ಕೇಂದ್ರವನ್ನು ಧ್ವಂಸಗೊಳಿಸಿದ ಘಟನೆ ನಡೆದಿದೆ.


ರಾತ್ರಿ 2 ಗಂಟೆಯ ಬಳಿಕ ನಡೆದ ಘಟನೆಯಲ್ಲಿ ಎಟಿಎಂನ ಗಾಜು ಹಾಗೂ ಪಾಸ್ಬುಕ್ ಪ್ರಿಂಟಿಂಗ್ ಯಂತ್ರವನ್ನು ಹಾನಿಗೊಳಿಸಲಾಗಿದ್ದು, ಎಟಿಎಂ ಹಣ ವಿತರಣಾ ಯಂತ್ರಕ್ಕೆ ಯಾವುದೇ ಹಾನಿಯಾಗಿಲ್ಲ. ಅಲ್ಲದೆ, ಬ್ಯಾಂಕ್ ಸಿಬ್ಬಂದಿಯ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ಪತ್ರವೊಂದನ್ನು ಆರೋಪಿ ಸ್ಥಳದಲ್ಲೇ ಬಿಟ್ಟು ಹೋಗಿದ್ದಾನೆ.


ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅದರ ಆಧಾರದ ಮೇಲೆ ಪೊಲೀಸರು ಶಶಿಕುಮಾರ್ ಎಂಬ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಸಾರ್ವಜನಿಕ ಆಸ್ತಿಗೆ ಹಾನಿ ಮಾಡಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದ್ದು, ಆರೋಪಿ ಈ ಹಿಂದೆಯೂ ಇದೇ ರೀತಿಯ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *