ಪುತ್ತೂರು: ಆಸ್ಪತ್ರೆಯೊಂದರಲ್ಲಿ ಪ್ಲಂಬಿಂಗ್ ಕೆಲಸ ನಿರ್ವಹಿಸುತ್ತಿದ್ದ ಕಾರ್ಮಿಕನೋರ್ವ ಆಯತಪ್ಪಿ ಆಸ್ಪತ್ರೆಯ ಮೊದಲ ಮಹಡಿಯಿಂದ ಕೆಳಗೆ ಬಿದ್ದು ಗಾಯಗೊಂಡ ಘಟನೆ ನಡೆದಿದೆ.

ಪ್ಲಂಬಿಂಗ್ ಕಾಮಗಾರಿ ನಡೆಸುತ್ತಿದ್ದ ವೇಳೆ ಸಮತೋಲನ ತಪ್ಪಿ ಕೆಳಗೆ ಬಿದ್ದ ಕಾರ್ಮಿಕನನ್ನು ಆಸ್ಪತ್ರೆಯ ಸಿಬ್ಬಂದಿ ತಕ್ಷಣ ರಕ್ಷಿಸಿ ಚಿಕಿತ್ಸೆ ನೀಡಿದ್ದಾರೆ.
ಮೊದಲ ಮಹಡಿಯಿಂದ ನೇರವಾಗಿ ಪೊದೆಯೊಳಗೆ ಬಿದ್ದಿದ್ದರಿಂದ ಗಂಭೀರ ಗಾಯಗಳಾಗದೇ, ಸಣ್ಣಪುಟ್ಟ ಪರಚಿದ ಗಾಯಗಳಷ್ಟೇ ಆಗಿವೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.









