Breaking
20 Sep 2026, Sun

ಅಲಂಗಾರು ಕ್ಷೇತ್ರದಲ್ಲಿ ರುದ್ರ ಪಠಣ ಸಮಿತಿಯಿಂದ ಸಾಮೂಹಿಕ ವೇದ ಸೂಕ್ತ ಪಾರಾಯಣ

ಮೂಡಬಿದ್ರೆ: ರುದ್ರ ಪಠಣ ಸಮಿತಿ ಬಂಟ್ವಾಳ ವತಿಯಿಂದ ಅಲಂಗಾರಿನ ಬಡಗು ಮಹಾಗಣಪತಿ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಧಾರ್ಮಿಕ ಕಾರ್ಯಕ್ರಮವು ಭಕ್ತಿಭಾವದಿಂದ ನಡೆಯಿತು.

ಈ ಸಂದರ್ಭದಲ್ಲಿ ರುದ್ರ ನಮಕ-ಚಮಕ ಸೂಕ್ತ, ಗಣಪತಿ ಸೂಕ್ತ, ದೇವಿ ಸೂಕ್ತ, ಸೌರ ಸೂಕ್ತ, ಮನ್ಯು ಸೂಕ್ತ, ಆಘಮರ್ಷಣ ಸೂಕ್ತ, ಮಂತ್ರಪುಷ್ಪ ಸೇರಿದಂತೆ ವಿವಿಧ ವೇದ ಸೂಕ್ತಗಳನ್ನು ಸಾಮೂಹಿಕವಾಗಿ ಪಠಿಸಲಾಯಿತು.

ಕಾರ್ಯಕ್ರಮದಲ್ಲಿ ಸಜೀಪ ಮಾಗಣೆ ತಂತ್ರಿಗಳಾದ ಎಂ. ಸುಬ್ರಹ್ಮಣ್ಯ ಭಟ್, ಎ. ರವಿಶಂಕರ ಮೈಯ್ಯ, ದೇವಳದ ಅರ್ಚಕರಾದ ಸುಬ್ರಹ್ಮಣ್ಯ ಭಟ್, ಮಹೇಶ್ ಭಟ್ ಹಾಗೂ ಪ್ರಸಾದ್ ಭಟ್ ಉಪಸ್ಥಿತರಿದ್ದರು.

ಅಲ್ಲದೆ, ಕೂಟ ಮಹಾ ಜಗತ್ತು ಮೂಡಬಿದಿರೆ ಅಂಗಸಂಸ್ಥೆಯ ಅಧ್ಯಕ್ಷ ಡಾ. ವಿದ್ವಾನ್ ಸೋಮಶೇಖರ ಮೈಯ್ಯ, ಬಂಟ್ವಾಳ ಎಸ್‌ವಿಎಸ್ ಕಾಲೇಜಿನ ನಿವೃತ್ತ ಪ್ರಾಚಾರ್ಯ ಸೀತಾರಾಮ ಮೈಯ್ಯ, ಕೆ. ರಾಜಾರಾಮ ಐತಾಳ, ಕೃಷ್ಣಕುಮಾರ ಸೋಮಯಾಜಿ, ಎಂ. ಶಾಂತರಾಮ ರಾವ್, ರಾಮಚಂದ್ರ ಮೈಯ್ಯ, ಎ. ಶ್ರೀನಿವಾಸ ಹೊಳ್ಳ, ಕೆ. ಮಿಥುನ್ ರಾವ್, ಕೆ. ರವಿ ಎಸ್. ಮೈಯ್ಯ, ವಿಶಾಲ್ ಹೆಗ್ಡೆ, ವಿಭವ್ ಮೈಯ್ಯ ಸೇರಿದಂತೆ ಹಲವರು ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

Leave a Reply

Your email address will not be published. Required fields are marked *