Breaking
20 Sep 2026, Sun

ಶ್ರೀ ಗುರು ರಾಘವೇಂದ್ರ ಸ್ವಾಮಿ ಮಂದಿರ ಚಿಟ್ಟೆಮಾರ್ ಸಂಪಿಗೆ-ಪುತ್ತಿಗೆ: ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಹಾಗೂ ‘ಭಜಕರ ಸಂಭ್ರಮ-2026’ ವಿಜೃಂಭಣೆಯಿಂದ ಸಂಪನ್ನ

ಮೂಡುಬಿದಿರೆ: ಶ್ರೀ ಗುರು ರಾಘವೇಂದ್ರ ಸ್ವಾಮಿ ಮಂದಿರ, ಚಿಟ್ಟೆಮಾರ್ ಸಂಪಿಗೆ-ಪುತ್ತಿಗೆ ಇದರ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಹಾಗೂ ಶ್ರೀ ಗುರು ರಾಘವೇಂದ್ರ ಸ್ವಾಮಿ ಭಜನಾ ಮಂಡಳಿಯ ಪ್ರಥಮ ವರ್ಷದ “ಭಜಕರ ಸಂಭ್ರಮ-2026” ಕಾರ್ಯಕ್ರಮವು ಅತ್ಯಂತ ಸಡಗರ ಹಾಗೂ ಭಕ್ತಿಭಾವದಿಂದ ಜರುಗಿತು.

ಚಿಟ್ಟೆಮಾರ್ ಸಂಪಿಗೆ-ಪುತ್ತಿಗೆಯ ಶ್ರೀ ಪದ್ಮಾವತಿ ಸಮುದಾಯ ಭವನದಲ್ಲಿ ನಡೆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶ್ರೀ ಗುರು ರಾಘವೇಂದ್ರ ಸ್ವಾಮಿ ಮಂದಿರದ ಮುಖ್ಯ ಅರ್ಚಕರಾದ ಜನಾರ್ದನ್ ಭಟ್ ಅವರು ದೀಪ ಪ್ರಜ್ವಲನೆಗೈದು ಉದ್ಘಾಟಿಸಿ ಸಮಸ್ತ ಭಕ್ತರಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

ಕಾರ್ಯಕ್ರಮದಲ್ಲಿ ದೇಶ-ವಿದೇಶ ಹಾಗೂ ವಿವಿಧ ರಾಜ್ಯಗಳಿಂದ ಆಗಮಿಸಿದ ಉದ್ಯಮಿಗಳು, ಧಾರ್ಮಿಕ ಮುಖಂಡರು ಹಾಗೂ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾರ್ಯಕ್ರಮದ ಮೆರುಗು ಹೆಚ್ಚಿಸಿದರು.

ಅಮೆರಿಕದ ಖ್ಯಾತ ಹೋಟೆಲ್ ಉದ್ಯಮಿ ಹಾಗೂ ಶ್ರೀ ಗುರು ರಾಘವೇಂದ್ರ ಸ್ವಾಮಿ ಮಂದಿರ ಟ್ರಸ್ಟ್‌ನ ಸಂಸ್ಥಾಪಕರಾದ ಕಿಶೋರ್ ಕೋಟ್ಯಾನ್ ಮತ್ತು ಭಾರತಿ ಕಿಶೋರ್ ಕೋಟ್ಯಾನ್ ದಂಪತಿಗಳು ಮುಖ್ಯ ಅತಿಥಿಗಳಾಗಿ ಆಗಮಿಸಿ, ಮಂದಿರದ ಭಕ್ತಿ ಹಾಗೂ ಸಾಂಸ್ಕೃತಿಕ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು. ವಿಜಯಲಕ್ಷ್ಮಿ ಕಾರ್ನಾಡ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ವೇದಿಕೆಯಲ್ಲಿ ಜಿಐಸಿ ಹಿರಿಯ ನಿವೃತ್ತ ಅಧಿಕಾರಿ, ಬುದನೇಶ್ವರ ಸೇವಾ ಸಮಿತಿಯ ಅಧ್ಯಕ್ಷರು ಹಾಗೂ ರಾಘವೇಂದ್ರ ಮಂದಿರದ ಟ್ರಸ್ಟಿಗಳಾದ ಡಾ. ಪ್ರಕಾಶ್ ಮೂಡಬಿದ್ರೆ, ಉದ್ಯಮಿ ಸತೀಶ್ ಬಂಗೇರ, ಮುಂಬೈನ ಉದ್ಯಮಿ ರಾಜೇಂದ್ರ ಸಾಲಿಯಾನ್, ಚಂದ್ರರಾಮ್ ಚಂದ್ರ ಕೋಟ್ಯಾನ್ ಹಾಗೂ ರಾಮ್ ಚಂದ್ರ ಕೋಟ್ಯಾನ್ ಉಪಸ್ಥಿತರಿದ್ದು ಶುಭ ಹಾರೈಸಿದರು.

ಮೂಡುಬಿದಿರೆ ಚೌಟರ ಅರಮನೆಯ ಕುಲ್‌ದೀಪ್ ಎಂ., ಕರ್ನಾಟಕ ರಾಜ್ಯ ಕ್ವಾರಿ ಆಂಡ್ ಕ್ರಶರ್ಸ್ ಅಸೋಸಿಯೇಷನ್ (ರಿ) ರಾಜ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಬಜಗೋಳಿ, ಧರ್ಮಸ್ಥಳ ಭಜನಾ ಪರಿಷತ್ ಜಿಲ್ಲಾ ಸಮನ್ವಯಾಧಿಕಾರಿ ಸಂತೋಷ್ ಪಿ. ಅಳಿಯೂರು, ‘ನಮ್ಮ ಕುಡ್ಲ’ ಮಾಧ್ಯಮ ಕ್ಷೇತ್ರದ ನಿರ್ದೇಶಕ ಲೀಲಾಕ್ಷ ಕರ್ಕೇರ ಹಾಗೂ ಸರ್ವೋದಯ ಫ್ರೆಂಡ್ಸ್ ಕಲ್ಲಮುಂಡ್ಕೂರು ಅಧ್ಯಕ್ಷ ಸುಕುಮಾರ್ ಅಮೀನ್ (ನಂದನ್ ಮನೆ, ಬಾನಂಗಡಿ ) ಪುತ್ತಿಗೆ ಗ್ರಾಮ ಪಂಚಾಯಿತಿಯ ಮಾಜಿ ಸದಸ್ಯ ನಾಗವರ್ಮ ಜೈನ್, ಪಲ್ಲಕ್ಕಿ ಫ್ರೆಂಡ್ಸ್ ಪುತ್ತಿಗೆ ಸಂಘಟನೆಯ ಸದಸ್ಯರು, ಮಹಮ್ಮಾಯಿ ಫ್ರೆಂಡ್ಸ್ ಕಳಸಬೈಲು ಅಧ್ಯಕ್ಷ ಸುಕುಮಾರ್ ನಾಯ್ಕ, ಡಾ. ಅನುಷಾ, ಬೆಂಗಳೂರಿನ ಇಂಟಿಗ್ರೇಟೆಡ್ ಗ್ಲೋಬಲ್ ರೆಗ್ಯುಲೇಟರಿ ಸರ್ವಿಸಸ್‌ನ ಫಾರ್ಮಾಸ್ಯೂಟಿಕಲ್ ಕನ್ಸಲ್ಟೆಂಟ್ ಭಾರತಿ ರಮೇಶ್, ಶ್ರೀಪತಿ ಭಟ್ ಮೂಡುಬಿದಿರೆ, ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕಲ್ಕೂರ, ಮಿತ್ತಬೈಲಿನ ಸುನಿಲ್ ಪುತ್ತಿಗೆ, ಮಾಜಿ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಗುಂಡ್ಯಡ್ಕದ ಕೃಷ್ಣ ಭಟ್, ಗೆಳೆಯರ ಬಳಗದ ಅಧ್ಯಕ್ಷ ನಾಗರಾಜ್ ಬೀರಬೆಟ್ಟು, ನಿಲೇಶ್ ಶೆಟ್ಟಿ ಕೊಳಕಾಡಿಗುತ್ತು, ಕಲ್ಲಮುಂಡ್ಕೂರು ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ವಸಂತ ನಾಯ್ಕ, ಪದ್ಮಾವತಿ ಚಾರಿಟೇಬಲ್ ಟ್ರಸ್ಟ್ (ರಿ) ಪುತ್ತಿಗೆ ಸ್ಥಾಪಕ ಅಧ್ಯಕ್ಷ ನವೀನ್ ಚಂದ್ರ ಹೆಗ್ಡೆ ಹಾಗೂ ಸಂಪಿಗೆಯ ಅಚಾರಿ ಎಸ್.ಕೆ. ಕಾಷ್ಠಶಿಲ್ಪ ಕೇಂದ್ರದ ಪ್ರಮುಖರು ಉಪಸ್ಥಿತರಿದ್ದರು.

ಅಂತರ್‌ರಾಜ್ಯ ಮಟ್ಟದ ಖ್ಯಾತ ನಿರೂಪಕ ದೀಪಕ್ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.

ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ವಿಶೇಷ ಪೂಜೆ, ಭಜನಾ ಸಂಭ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಮಹಾ ಅನ್ನಸಂತರ್ಪಣೆ ನಡೆಯಿತು.

Leave a Reply

Your email address will not be published. Required fields are marked *