ಕಲ್ಲಡ್ಕ : ವಿಜ್ಞಾನದ ರಹಸ್ಯಗಳನ್ನು ಕೌತುಕದಿಂದ ಪ್ರಶ್ನಿಸುವ ಸಾಮರ್ಥ್ಯ ಬೆಳೆಸಿಕೊಂಡಲ್ಲಿ ವಿದ್ಯಾರ್ಥಿಗಳು ಸೃಜನಶೀಲವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದು ದ. ಕ. ಜಿ. ಪಂ. ಕಿ. ಪ್ರಾ ಶಾಲೆ ಏಮಾಜೆಯ ಎಸ್. ಡಿ. ಎಂ. ಸಿ ಉಪಾಧ್ಯಕ್ಷರಾದ ಹರೀಶ್ ಕುಲಾಲ್ ಹೇಳಿದರು.

ಫೆ.28 ರಂದು ಶಾಲೆಯಲ್ಲಿ ನಡೆದ ವಿಜ್ಞಾನ ದಿನಾಚರಣೆಯ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ವಹಿಸಿ, ಶುಭಾಶಯದ ನುಡಿಗಳನ್ನಾಡಿದರು.ವಿಜ್ಞಾನ ದಿನಾಚರಣೆಯನ್ನು ಸರ್. ಸಿ. ವಿ. ರಾಮನ್ ಅವರನ್ನು ಸ್ಮರಿಸಿ ದೀಪಬೆಳಗುವುದರೊಂದಿಗೆ ಕಂಬಳಬೆಟ್ಟು ಕ್ಲಸ್ಟರ್ ನ ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ ಕಾರ್ಯಕ್ರಮಕ್ಕೆ ಚಾಲನೆಯನ್ನಿತ್ತು ಶುಭ ಹಾರೈಸಿದರು.

ಈ ವೇಳೆ ವಿದ್ಯಾರ್ಥಿಗಳು ವಿವಿಧ ಪ್ರಯೋಗಗಳನ್ನು ಪ್ರದರ್ಶಿಸುವುದರೊಂದಿಗೆ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳನ್ನು ಈ ಸಂದರ್ಭದಲ್ಲಿ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು.
ಸಂಪನ್ಮೂಲ ವ್ಯಕ್ತಿಗಳಾಗಿ ಬಾಳ್ತಿಲ ಕಂಟಿಕ ಸರಕಾರಿ ಶಾಲೆಯ ಮುಖ್ಯ ಶಿಕ್ಷಕಿ ಚೇತನಾ ವಿದ್ಯಾರ್ಥಿಗಳು ವಿಜ್ಞಾನದ ಜ್ಞಾನವನ್ನು ಪಡೆದುಕೊಂಡು ಸಂಸ್ಕಾರತವಾಗಿ ವಿದ್ಯಾರ್ಜನೆಯಲ್ಲಿ ತೋಡಗಿಸಿಕೊಳ್ಳುವಂತೆ ತಿಳಿಸಿದರು.

ಚಲನಚಿತ್ರ ನಟರು ಹಾಗೂ ರಂಗಭೂಮಿ ಕಲಾವಿದರಾದ ಚಂದ್ರಹಾಸ ಶೆಟ್ಟಿ ಮಾಣಿ ಉಪಸ್ಥಿತರಿದ್ದು ,ಮಕ್ಕಳ ಪೋಷಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕಿ ತ್ರಿವೇಣಿ ಸ್ವಾಗತಿಸಿ, ಸಹಶಿಕ್ಷಕರಾದ ಉದಯಚಂದ್ರ ಕೆ. ಎಸ್ ವಂದಿಸಿದರು. ಗೌರವಶಿಕ್ಷಕಿ ಶಿಕ್ಷಕಿಯರಾದ ಶ ದೀಕ್ಷಾ, ಐಸಮ್ಮ ಸಹಕರಿಸಿದರು. ಶಿಕ್ಷಕಿ ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.





