Breaking
2 Mar 2026, Mon

ಆರೋಗ್ಯತ್ಮಕ ಸಮಾಜ ಕಟ್ಟುವಲ್ಲಿ ಮಹಿಳೆಯ ಪಾತ್ರ ಬಹಳ ಮುಖ್ಯವಾಗಿದೆ: ಸಾದ್ವಿ ಶ್ರೀ ಶ್ರೀ ಮಾತಾನಂದಮಯೀ

ವಿಟ್ಲ : ಆರೋಗ್ಯತ್ಮಕ ಸಮಾಜ ಕಟ್ಟುವಲ್ಲಿ ಮಹಿಳೆಯ ಪಾತ್ರ ಬಹಳ ಮುಖ್ಯವಾಗಿದೆ. ಮಹಿಳೆಯಲ್ಲಿರುವ ಕೌಶಲ್ಯವನ್ನು ಹೊರತೆಗೆದು ಸ್ವಾವಲಂಬಿಗೊಳಿಸಿ ಸ್ವಾಭಿಮಾನದ ಜೀವನ ನಡೆಸಲು ಶ್ರೀ ಕ್ಷೇತ್ರ ಧರ್ಮಸ್ಥಳದ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮಗಳು ಉತ್ತಮ ವೇದಿಕೆ ಆಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಸಾದ್ವಿ ಶ್ರೀ ಶ್ರೀ ಮಾತಾನಂದಮಯೀ ಹೇಳಿದರು. 

ಅವರು ಮಾರ್ಚ್ 1 ರಂದು  ವಿಟ್ಲ ಶಿವಗಿರಿ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ .ಸಿ ಟ್ರಸ್ಟ್( ರಿ)ವಿಟ್ಲ ತಾಲೂಕು ಮಹಿಳಾ ಜಾನವಿಕಾಸ ಕಾರ್ಯಕ್ರಮದಡಿಯಲ್ಲಿ ನಡೆದ ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಟಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ವನ್ನು ಉದ್ಘಾಟಿಸಿ  ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಗತಿ ಬಂದು ಸ್ವ – ಸಹಾಯ ಸಂಘಗಳ ಒಕ್ಕೂಟ ವಿಟ್ಲ ವಲಯ ಅಧ್ಯಕ್ಷೆ  ಪ್ರಮೀಳಾ ವಹಿಸಿದ್ದರು.

ಈ ವೇಳೆ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ 2 ರ ನಿರ್ದೇಶಕ ಬಾಬು ನಾಯ್ಕ ಮಾತನಾಡಿ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮಗಳು ಮಹಿಳೆಯರ ಸಬಲೀಕರಣಕ್ಕೆ ಆದ್ಯತೆ ಕೊಡುವ ಕಾರ್ಯಕ್ರಮಗಳಾಗಿದ್ದು ಸಂಪನ್ಮೂಲ ವ್ಯಕ್ತಿಗಳು ನೀಡುವ ಮಾಹಿತಿಯನ್ನು ಪಡೆದು ಮಹಿಳೆಯರು ಕೇವಲ ವ್ಯಕ್ತಿಗಳಾಗದೆ ಶಕ್ತಿಗಳಾಗಬೇಕು ಎಂದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಕಿತ್ತೂರ್ ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತ ನ್ಯಾಯವಾದಿ ಶೈಲಜಾ ರಾಜೇಶ್  ಮಹಿಳೆಯರ ವೃತ್ತಿ ಬದುಕಿನೊಂದಿಗೆ ಕೌಟುಂಬಿಕ ಜೀವನದ ಬಗ್ಗೆ ಮಾತನಾಡಿ ಅಸ್ತು ಸಂಸ್ಕೃತಿಯ ಜೊತೆಗೆ ಶಿಸ್ತು ಸಂಸ್ಕೃತಿಯ ಅಗತ್ಯತೆ ಇದೆ ಎಂದರು.

 ವಿಟ್ಲ ಲಕ್ಷ್ಮಿ ಜ್ಯುವೆಲ್ಲರ್ಸ್ ನ ಪ್ರದೀಪ್ ಚಿನ್ನ ಹೂಡಿಕೆ ಭವಿಷ್ಯದ ಪ್ರತೀಕ ಎಂಬ ವಿಷಯದ ಬಗ್ಗೆ ಮಾತನಾಡಿ  ಚಿನ್ನ ಖರೀದಿಯಲ್ಲಿ ಹಣ ಹೂಡುವಿಕೆ ಹಾಗೂ ಚಿನ್ನದ ಸಂರಕ್ಷಣೆ ಬಗ್ಗೆ ಸವಿವಿವಾರವಾದ ಮಾಹಿತಿ ನೀಡಿದರು.

 ಜ್ಞಾನ ವಿಕಾಸ ಸದಸ್ಯರುಗಳಾದ ಶಾಲಿನಿ ಹಾಗೂ ಲೀಲಾಕ್ಷಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

 ರಂಗೋಲಿ ಹಾಗೂ ಹೂಗುಚ್ಛ  ತಯಾರಿ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

 ಈ  ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ವಿಟ್ಲ ವಲಯ ಅಧ್ಯಕ್ಷ ಕೃಷ್ಣಯ್ಯ ಬಲ್ಲಾಳ್, ಜನಜಾಗೃತಿ ವೇದಿಕೆ ವಿಟ್ಲ ವಲಯ ಸದಸ್ಯರಾದ ವಕೀಲ  ನಟೇಶ್ ವಿಟ್ಲ ,ಉಪಸ್ಥಿತರಿದರು.

 ಗ್ರಾಮಾಭಿವೃದ್ಧಿ ಯೋಜನೆಯ ವಿಟ್ಲ ತಾಲೂಕು ಯೋಜನಾಧಿಕಾರಿ ಸುರೇಶ್ ಗೌಡ ಪ್ರಾಸವಿಕದೊಂದಿಗೆ ಸ್ವಾಗತಿಸಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ದೀಪ ವಾರ್ಷಿಕ ವರದಿ ವಾಚಿಸಿ,ವಿಟ್ಲ ವಲಯ ಮೇಲ್ವಿಚಾರಕ ಜಗದೀಶ್  ವಂದಿಸಿದರು, ಚೈತನ್ಯ ಚಂದಪ್ಪ ಕಾರ್ಯಕ್ರಮ ನಿರೂಪಿಸಿದರು.

 ನಂತರ ಜ್ಞಾನವಿಕಾಸ ಸದಸ್ಯರುಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

Leave a Reply

Your email address will not be published. Required fields are marked *