Breaking
20 Jun 2026, Sat

ಕಿನ್ನಿಗೋಳಿಯಲ್ಲಿ ಹಾಡುಹಗಲೇ ಚಿರತೆ ಪ್ರತ್ಯಕ್ಷ : ಸ್ಥಳೀಯರಲ್ಲಿ ಆತಂಕ

ಕಿನ್ನಿಗೋಳಿ: ಹಾಡು ಹಗಲೇ ಅತ್ತೂರು ಹಾಲಿನ ಸೊಸೈಟಿ ಬಳಿ ಚಿರತೆ ಕಂಡು ಬಂದ ಘಟನೆ ಫೆ.18 ರಂದು ನಡೆದಿದೆ. 

ಮಧ್ಯಾಹ್ನದ ವೇಳೆ ಪಕ್ಷಿಕೆರೆ ಪ್ರದೇಶದಲ್ಲಿ ಆಟೋ ಚಾಲಕ ನಾಗೇಶ್ ಅವರು ಆಟೋದಲ್ಲಿ ಸಂಚರಿಸುತ್ತಿದ್ದಾಗ ಚಿರತೆಯನ್ನು ಗಮನಿಸಿದ್ದಾರೆ. ರಸ್ತೆ ದಾಟುತ್ತಿದ್ದ ಚಿರತೆ ಆಟೋ ರಿಕ್ಷಾವನ್ನು ಕಂಡ ತಕ್ಷಣ ಹಿಂದೆ ಓಡಿದೆ.

ಅಲ್ಲದೆ ಕೆಲ ದಿನಗಳ ಹಿಂದೆ ಹಾಲಿನ ಸೊಸೈಟಿ ಬಳಿ ಚಿರತೆ ಹೆಜ್ಜೆ ಗುರುತು ಸಹ ಪತ್ತೆಯಾಗಿದೆ ಎನ್ನಲಾಗಿದೆ.

ಈ ಚಿರತೆ ಓಡಾಟದಿಂದ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

Leave a Reply

Your email address will not be published. Required fields are marked *