ಸೌತಡ್ಕ : 2026 ರಿಂದ 2029ರ ಅವಧಿಗೆ ಹೊಸ ವಿಶ್ವಸ್ಥ ಮಂಡಳಿ ರಚನೆಯ ಕಾರ್ಯಕ್ರಮವು ಸೌತಡ್ಕದ ಬೆನ್ನುಹುರಿ ಅಪಘಾತಕ್ಕೊಳಗಾದ ದಿವ್ಯಾಂಗರ ಪುನಶ್ಚೇತನ ಕೇಂದ್ರದಲ್ಲಿ ಫೆ.17 ರಂದು ನಡೆಯಿತು.
ಕಾರ್ಯಕ್ರಮದಲ್ಲಿ ಮುಂದಿನ ಮೂರು ವರ್ಷಗಳ ಅವಧಿಗೆ ಅಧ್ಯಕ್ಷರಾಗಿ ಕೆ. ವಿನಾಯಕ ರಾವ್ ರವರನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಬಾಲಕೃಷ್ಣ, ಕೋಶಾಧಿಕಾರಿಯಾಗಿ ಜೈ ರಾಜ್ ಸಾಲ್ಯಾನ್ ಕಾನರ್ಪ, ಕಾರ್ಯದರ್ಶಿಯಾಗಿ ವಿಷ್ಣು ಪ್ರಸಾದ್ ತೆಂಕಿಲ್ಲಾಯ ಹಾಗೂ ಟ್ರಸ್ಟಿಗಳಾಗಿ ಸ್ವರ್ಣಗೌರಿ, ಗಿರೀಶ್ ರಾವ್ ಕೆ.ಯು., ಮತ್ತು ಪೃಥ್ವೀಶ ಆಯ್ಕೆಯಾಗಿದ್ದಾರೆ.

ಈ ವೇಳೆ ಮಾತನಾಡಿದೆ ಅಧ್ಯಕ್ಷರಾದ ಸ್ವರ್ಣಗೌರಿಯವರು ಕಳೆದ ಮೂರು ವರ್ಷಗಳ ಸೇವಾ ಪಯಣದ ಅನುಭವವನ್ನು ಹಂಚಿಕೊಂಡರು. ಹೊಸದಾಗಿ ರಚನೆಯಾದ ವಿಶ್ವಸ್ಥ ಮಂಡಳಿ ಸದಸ್ಯರಿಗೆ ID ಕಾರ್ಡ್‌ಗಳನ್ನು ನೀಡುವ ಮೂಲಕ ಹೃತ್ಪೂರ್ವಕ ಅಭಿನಂದನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಪಾರುಪತ್ಯಗಾರರಾದ ಲಕ್ಷ್ಮೀನಾರಾಯಣ ರಾವ್, ಸೌತಡ್ಕ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷರಾದ ಕೆ ಕೃಷ್ಣ ಭಟ್, ಸೇವಾಭಾರತಿ ಸಲಹಾ ಮಂಡಳಿ ಸದಸ್ಯರಾದ ಡಾ. ಜಯಕುಮಾರ್ ಶೆಟ್ಟಿ, ಸೇವಾಧಾಮ ಸಂಚಾಲಕರಾದ ಕೆ. ಪುರಂದರ ರಾವ್, ಹಾಗೂ ನಿಕಟಪೂರ್ವ ಟ್ರಸ್ಟಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಸಂಸ್ಥೆಯ ಹಿತೈಷಿ ಹಾಗೂ ದಾನಿಯಾದ ಬೆನ್ನುಹುರಿ ಅಪಘಾತಕ್ಕೊಳಗಾದ ಶ್ರೀ ಮಧ್ವಮೂರ್ತಿ ಅವರ ಸ್ಮರಣಾರ್ಥವಾಗಿ ನುಡಿನಮನ ಸಲ್ಲಿಸಲಾಯಿತು.






