Breaking
22 Sep 2026, Tue

ಅಲ್ ಇಂಡಿಯಾ ಎಲೆಕ್ಟ್ರಿಸಿಟಿ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ ಆಯೋಜಿಸಿದ್ದ ಪುರುಷರ ವಾಲಿಬಾಲ್ ಪಂದ್ಯಾಕೂಟ: ಪವರ್‌ಮ್ಯಾನ್ ಚಂದ್ರಶೇಖರ ಗೌಡ ಅವರ ಕರ್ನಾಟಕ ಕೆಪಿಟಿಸಿಎಲ್ ತಂಡಕ್ಕೆ ದ್ವಿತೀಯ ಸ್ಥಾನ

ಬೆಳ್ತಂಗಡಿ: ಅಲ್ ಇಂಡಿಯಾ ಎಲೆಕ್ಟ್ರಿಸಿಟಿ ಸ್ಪೋರ್ಟ್ಸ್ ಕಂಟ್ರೋಲ್ ಬೋರ್ಡ್ ಆಯೋಜಿಸಿದ್ದ ಪುರುಷರ ವಾಲಿಬಾಲ್ ಪಂದ್ಯಾಕೂಟದಲ್ಲಿ ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಪವರ್‌ಮ್ಯಾನ್ ಆಗಿರುವ ಚಂದ್ರಶೇಖರ ಗೌಡ ಮಾವಿನಕಟ್ಟೆ ಕೊಯ್ಯೂರು ಅವರು ಕರ್ನಾಟಕ ಕೆಪಿಟಿಸಿಎಲ್ ತಂಡಕ್ಕೆ ಆಯ್ಕೆಯಾಗಿ ಪಂದ್ಯಾಟದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

ಫೆ. 16ರಿಂದ 18ರವರೆಗೆ ಕೇರಳದ ತಿರುವನಂತಪುರದಲ್ಲಿ ನಡೆದ ಈ ಪಂದ್ಯಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡಿದ್ದಾರೆ. ಸುಮಾರು 47 ವರ್ಷಗಳ ನಂತರ ಕರ್ನಾಟಕ ತಂಡ ಈ ಸಾಧನೆ ಮಾಡುವ ಮೂಲಕ ಮತ್ತೊಮ್ಮೆ ಗಮನ ಸೆಳೆದಿದೆ.

Leave a Reply

Your email address will not be published. Required fields are marked *