ಗಂಗೊಳ್ಳಿ: ಬೈಕೊಂದು ಕಂಟೈನರ್ ಲಾರಿಯ ಚಕ್ರದಡಿಗೆ ಬಿದ್ದು ಬೈಕ್ ಸವಾರ ಮೃತಪಟ್ಟ ಘಟನೆ ಮರವಂತೆ ಯೂ ಟರ್ನ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ.
ಮೃತಪಟ್ಟವರನ್ನು ಜೈರಾಮ ಬೈರು ಕಾತ್ರೋಟ ಎಂದು ಗುರುತಿಸಲಾಗಿದೆ.

ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಬರುತ್ತಿದ್ದ ಲಾರಿಯ ಹಿಂಬದಿಯಿಂದ ಬೈಕ್ ಬರುತ್ತಿತ್ತು. ಈ ವೇಳೆ ಲಾರಿಯ ಹಿಂದಿನ ಟೈರ್‌ಗೆ ಬೈಕ್ ತಾಗಿದ್ದು, ಪರಿಣಾಮ ಬೈಕ್ ರಸ್ತೆಗೆ ಬಿದ್ದಿದೆ. ಸವಾರ ಲಾರಿಯ ಹಿಂಬದಿಯ ಚಕ್ರದಡಿ ಸಿಲುಕಿಕೊಂಡಿದ್ದಾರೆ.

ಅಪಘಾತದಲ್ಲಿ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ದಾರಿ ಮಧ್ಯೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಈ ಕುರಿತು ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






