Breaking
20 Jun 2026, Sat

ನಿಯಂತ್ರಣ ತಪ್ಪಿ ಮೋರಿಗೆ ಢಿಕ್ಕಿಯಾದ ಕಾರು ಬೆಂಕಿಗಾಹುತಿ

ಪುತ್ತೂರು : ನೀರಕಟ್ಟೆ ಸಮೀಪದ ಕಾಂಚನ ಕ್ರಾಸ್ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮೋರಿಗೆ ಢಿಕ್ಕಿ ಹೊಡೆದು ನಂತರ ಕಾರು ಬೆಂಕಿಗೆ ಆಹುತಿಯಾದ ಘಟನೆ ಜ.30 ರಂದು ನಡೆದಿದೆ.

ಹಾಸನದಿಂದ ಉಪ್ಪಿನಂಗಡಿ ಕಡೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ವಿರುದ್ಧ ದಿಕ್ಕಿನಲ್ಲಿ ಸಾಗಿದೆ. ಈ ವೇಳೆ ಹೊಸ ಹೆದ್ದಾರಿ ಕಾಮಗಾರಿಗಾಗಿ ನಿರ್ಮಿಸಲಾಗುತ್ತಿದ್ದ ಮೋರಿಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಕಾರಿನ ಇಂಜಿನ್ ಭಾಗದಲ್ಲಿ ಕಿಡಿ ಕಾಣಿಸಿಕೊಂಡು ಕಾರು ಹೊತ್ತಿ ಉರಿದಿದೆ.

ಘಟನೆಯಲ್ಲಿ ಕಾರಿನಲ್ಲಿದ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

ಮಾಹಿತಿ ಪಡೆದ ತಕ್ಷಣ ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿಗಳು ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Leave a Reply

Your email address will not be published. Required fields are marked *