ಬಂಟ್ವಾಳ: ಪಾಣೆಮಂಗಳೂರು ಬಂಗ್ಲೆಗುಡ್ಡೆಯ ಶ್ರೀ ಕಲ್ಲುರ್ಟಿ ದೈವಸ್ಥಾನದಲ್ಲಿ ವರ್ಷಾವಧಿ ಕೋಲದ ಅಂಗವಾಗಿ ಸ್ವಸ್ತಿ ಪುಣ್ಯಾಹ ಗಣಯಾಗ, ನವಕಲಶಾಭಿಷೇಕ ಪರ್ವ ಸೇವೆ ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ನೆರವೇರಿತು.

ಈ ಸಂದರ್ಭದಲ್ಲಿ ಡಾ. ವಿಶ್ವನಾಥ್ ನಾಯಕ್, ಶ್ರೀಧರ ನಾಯಕ್, ರಮೇಶ್ ನಾಯಕ್, ತಾರಾನಾಥ ಮೂಲ್ಯ, ಸಂತೋಷ್, ಜನಾರ್ಧನ ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.





