ಮಂಗಳೂರು : ಪುರಭವನದ ಮುಂಭಾಗದಲ್ಲಿರುವ ಪೊಲೀಸ್ ವಸತಿ ಗೃಹಕ್ಕೆ ಕಳ್ಳರು ನುಗ್ಗಿ ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ದಿರುವ ಘಟನೆ ನಡೆದಿದೆ.

ಪೊಲೀಸ್ ಲೈನ್ ಎಒನ್ ಬ್ಲಾಕ್‌ನಲ್ಲಿರುವ ದ.ಕ ಜಿಲ್ಲೆಯ ಕಂಟ್ರೋಲ್ ರೂಮಲ್ಲಿ ಕೆಲಸ ಮಾಡುತ್ತಿರುವ ಸಮರ್ಥ್ ಅವರು ರಜೆ ಮೇಲೆ ಊರಿಗೆ ತೆರಳಿದರು . ಈ ಸಂದರ್ಭ ಕಳ್ಳರು ಅವರ ಮನೆಯ ಬಾಗಿಲು ಹೊಡೆದು ಒಳ ನುಗ್ಗಿ ಅವರ ಮನೆಯ ಗೋಡ್ರೇಜ್ ನಲ್ಲಿ ಇರಿಸಿದ್ದ ಹಲವು ಬೆಲೆಬಾಳುವ ವಸ್ತುಗಳನ್ನು ಕದ್ದೊಯ್ಡಿದ್ದಾರೆ ಎಂದು ತಿಳಿದುಬಂದಿದೆ.
ಘಟನ ಸ್ಥಳಕ್ಕೆ ದಕ್ಷಿಣ ಪೊಲೀಸ್ ಠಾಣೆಯ ಪಿಎಸ್ಐ 1 ಮತ್ತು ಕ್ರೈಂ ಸಿಬ್ಬಂದಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.





