Breaking
25 Sep 2026, Fri

ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರ ಕಣಿಯೂರಿನಲ್ಲಿ ನವರಾತ್ರಿ ಮಹೋತ್ಸವ

ಕಣಿಯೂರು: ನವರಾತ್ರಿ ಅಂಗವಾಗಿ ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದಲ್ಲಿ ಅ.11ರಿಂದ 19ರವರೆಗೆ ನವರಾತ್ರಿ ಮಹೋತ್ಸವವನ್ನು ಭಕ್ತಿಭಾವದಿಂದ ಆಯೋಜಿಸಲಾಗಿದೆ. ಮಹೋತ್ಸವದ ಅಂಗವಾಗಿ ಪ್ರತಿದಿನ ವಿಶೇಷ ಪೂಜೆ, ಮಹಾಪೂಜೆ, ಪ್ರಸಾದ ಭೋಜನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.


ಅ.11ರಂದು ಮಹೋತ್ಸವಕ್ಕೆ ಚಾಲನೆ ದೊರೆಯಲಿದ್ದು, ಬೆಳಗ್ಗೆ ಶ್ರೀ ದೇವಿಯ ಅಭಿಷೇಕ ಮತ್ತು ಪೂಜೆ, ಮಧ್ಯಾಹ್ನ ಮಹಾಪೂಜೆ ಹಾಗೂ ಪ್ರಸಾದ ಭೋಜನ ನಡೆಯಲಿದೆ. ಸಂಜೆ ನಿತ್ಯಪೂಜೆ, ಭಜನೆ ಹಾಗೂ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.


ಅ.12ರಿಂದ ಅ.17ರವರೆಗೆ ಪ್ರತಿದಿನ ಬೆಳಗ್ಗೆ ಶ್ರೀ ದೇವಿಯ ಅಭಿಷೇಕ ಮತ್ತು ಪೂಜೆ, ಮಧ್ಯಾಹ್ನ ಮಹಾಪೂಜೆ ಹಾಗೂ ಪ್ರಸಾದ ಭೋಜನ ನಡೆಯಲಿದ್ದು, ಸಂಜೆ ನಿತ್ಯಪೂಜೆ, ಭಜನೆ ಮತ್ತು ಅನ್ನಪ್ರಸಾದ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ಜರುಗಲಿವೆ. ಅ.13ರಂದು ವಿಶೇಷವಾಗಿ ‘ಸಪ್ತಶತೀ ಪಾರಾಯಣ’ ಕಾರ್ಯಕ್ರಮ ಆಯೋಜಿಸಲಾಗಿದೆ. ಅ.14ರಂದು ‘ಶ್ರೀ ಸತ್ಯನಾರಾಯಣ ಪೂಜೆ’ ಹಾಗೂ ಅ.15ರಂದು ʻಶ್ರೀ ನಾಗತಂಬಿಲʼ ಕಾರ್ಯಕ್ರಮ ನಡೆಯಲಿದೆ.


ಅ.16ರಂದು ಬೆಳಗ್ಗೆ ಭಜನಾ ಕಾರ್ಯಕ್ರಮದೊಂದಿಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು ನಡೆಯಲಿದ್ದು, ಸಂಜೆ ಭಜನೆ, ನಿತ್ಯಪೂಜೆ ಹಾಗೂ ಅನ್ನಪ್ರಸಾದ ಸೇವೆ ಆಯೋಜಿಸಲಾಗಿದೆ. ಅ.17ರಂದು ಕೂಡ ವಿಶೇಷ ಪೂಜೆ, ಭಜನೆ ಮತ್ತು ಪ್ರಸಾದ ಭೋಜನ ನಡೆಯಲಿದೆ.
ಅ.18ರಂದು ಬೆಳಗ್ಗೆ ಶ್ರೀ ದೇವಿಯ ಅಭಿಷೇಕ ಮತ್ತು ಪೂಜೆ ನಡೆಯಲಿದ್ದು, ಬಳಿಕ ‘ಚಂಡಿಕಾ ಹೋಮ’ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಇದೇ ದಿನ ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.


ಅ.19ರಂದು ನವರಾತ್ರಿ ಮಹೋತ್ಸವದ ಸಮಾರೋಪ ನಡೆಯಲಿದ್ದು, ಬೆಳಗ್ಗೆ ಶ್ರೀ ದೇವಿಯ ಅಭಿಷೇಕ ಹಾಗೂ ಪೂಜೆ, ಮಧ್ಯಾಹ್ನ ಮಹಾಪೂಜೆ ಮತ್ತು ಪ್ರಸಾದ ಭೋಜನ ನಡೆಯಲಿದೆ. ಸಂಜೆ ನಿತ್ಯಪೂಜೆ ಹಾಗೂ ವಿಶೇಷ ಧಾರ್ಮಿಕ ಸೇವೆಗಳ ಬಳಿಕ ರಾತ್ರಿ ಶ್ರೀ ದೇವಿಯ ಮಹಾಪೂಜೆ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಮಹೋತ್ಸವಕ್ಕೆ ತೆರೆ ಬೀಳಲಿದೆ.
ಮಹೋತ್ಸವದ ಎಲ್ಲ ದಿನಗಳಲ್ಲೂ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗುವಂತೆ ಆಯೋಜಕರು ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *