ಸಜೀಪ ಮಾಗಣೆ ಶ್ರೀ ಕ್ಷೇತ್ರದ ಶ್ರೀ ಕಾಳಾದ್ರಿ ಸಾನಿಧ್ಯ ಬಿಲ್ಲಂ ಪದವಿನಲ್ಲಿ ಕಾರ್ತಿಕ ಮಾಸದ ಪ್ರಯುಕ್ತ ಒಂದು ತಿಂಗಳ ಸಾಮೂಹಿಕ ದೀಪಾರಾಧನೆ ಧಾರ್ಮಿಕ ವಿಧಿವಿಧಾನಗಳೊಂದಿಗೆ ಆರಂಭಗೊಂಡಿತು.
ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್ ಅವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು.

ಈ ಸಂದರ್ಭದಲ್ಲಿ ಸಜೀಪನಡು ಶ್ರೀ ಷಣ್ಮುಖ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಮುಳ್ಳುಂ ವೆಂಕಟೇಶ್ವರ ಭಟ್, ಜಿ. ರಾಮಕೃಷ್ಣ ಭಟ್, ಗಣಪತಿ ಮಹಾಬಲೇಶ್ವರ ಭಟ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ. ರಾಧಾಕೃಷ್ಣ ಆಳ್ವ, ಬಿಜಂದಾರ್ ಗುತ್ತು ಶಿವರಾಮ ಭಂಡಾರಿ, ಕಿಶನ್ ಸೇಣವ, ಸುಧಾಕರ ಕೇಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.



