Breaking
11 Nov 2026, Wed

ಯುವವಾಹಿನಿ ಕುಪ್ಪೆಪದವು – ಎಡಪದವು ಘಟಕದಿಂದ ದೀಪಾವಳಿ ಪ್ರಯುಕ್ತ ಧಾನ್ಯ ಪೂಜೆ, ಗೋವು ಪೂಜೆ

ಕುಪ್ಪೆಪದವು: ಯುವವಾಹಿನಿ (ರಿ.) ಕುಪ್ಪೆಪದವು–ಎಡಪದವು ಘಟಕದ ವತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ ಭಜನಾ ಸಂಕೀರ್ತನೆ, ಧಾನ್ಯ ಪೂಜೆ ಹಾಗೂ ಗೋವು ಪೂಜೆ ಕಾರ್ಯಕ್ರಮವು ಕುಲವೂರು ಹೊಸಹೊಕ್ಲು ಸತೀಶ್ ಕೆ.ಎಂ. ಅವರ ಮನೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಘಟಕದ ಅಧ್ಯಕ್ಷ ಎಡಪದವು ಶ್ರೀ ಗೋಪಾಲ ಪೂಜಾರಿ, ‘ವಿದ್ಯೆ, ಉದ್ಯೋಗ, ಸಂಪರ್ಕ’ ಎಂಬ ಧ್ಯೇಯವಾಕ್ಯದೊಂದಿಗೆ ಕಾರ್ಯಾಚರಿಸುತ್ತಿರುವ ಯುವವಾಹಿನಿ ಸಂಸ್ಥೆಯು ಆಯೋಜಿಸುವ ಇಂತಹ ಧಾರ್ಮಿಕ ಕಾರ್ಯಕ್ರಮಗಳು ಇಂದಿನ ಯುವಜನತೆಗೆ ಉತ್ತಮ ಸಂಸ್ಕಾರ ಹಾಗೂ ಸಾಂಸ್ಕೃತಿಕ ಮೌಲ್ಯಗಳನ್ನು ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಇಂತಹ ಅವಿಸ್ಮರಣೀಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.

ಪೂಜಾ ಕಾರ್ಯದ ಬಳಿಕ ಪ್ರಸಾದ ವಿತರಣೆ ನಡೆಯಿತು. ಕಾರ್ಯಕ್ರಮಕ್ಕೆ ಸಂಪೂರ್ಣ ವ್ಯವಸ್ಥೆ ಕಲ್ಪಿಸಿದ ಸತೀಶ್ ಮತ್ತು ಪೂರ್ಣಿಮಾ ದಂಪತಿಯನ್ನು ಶಾಲು ಹೊದಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಘಟಕದ ಮಾಜಿ ಅಧ್ಯಕ್ಷ ಅಜಯ್ ಅಮೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಅಧ್ಯಕ್ಷರಾದ ಸತೀಶ್ ಕೆ.ಎಂ., ಜಗದೀಶ್ ದುರ್ಗಾಕೊಡಿ, ಸೌಮ್ಯ ಕೋಟ್ಯಾನ್, ಅಕ್ಷಿತ್ ಕುಮಾರ್ ಹಾಗೂ ಶ್ರೀಧರ್ ಪೂಜಾರಿ ಉಪಸ್ಥಿತರಿದ್ದರು.

ಘಟಕದ ಪ್ರಧಾನ ಕಾರ್ಯದರ್ಶಿ ಸಂತೋಷ್ ಬೊಲಿಯ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ಧನ್ಯಶ್ರೀ ವಂದಿಸಿದರು.

Leave a Reply

Your email address will not be published. Required fields are marked *