Breaking
3 Feb 2026, Tue

ಸಿಟಿ ಬಸ್ ಒಳಗೆ ಚಿರತೆ ನುಗ್ಗಿರುವ ಶಂಕೆ

ಉಡುಪಿ : ರಾತ್ರಿ ಪಾರ್ಕ್ ಮಾಡಲಾಗಿದ್ದ ಸಿಟಿ ಬಸ್ ಒಳಗೆ ಚಿರತೆ ನುಗ್ಗಿರುವ ಶಂಕೆ ವ್ಯಕ್ತವಾಗಿರುವ ಘಟನೆ ಗರಡಿಮಜಲು ಪ್ರದೇಶದಲ್ಲಿ ನಡೆದಿದೆ.

ಬೆಳಿಗ್ಗೆ ಬಸ್ ಪರಿಶೀಲನೆ ನಡೆಸಿದ ವೇಳೆ ಚಾಲಕನ ಸೀಟು ಸೇರಿದಂತೆ ಒಳಭಾಗದಲ್ಲಿ ಭಾರೀ ಹಾನಿ ಉಂಟಾಗಿದ್ದು ದೊಡ್ಡ ಗಾತ್ರದ ಹೆಜ್ಜೆ ಗುರುತುಗಳು ಪತ್ತೆಯಾಗಿವೆ.

ಆರಂಭದಲ್ಲಿ ಕಿಡಿಗೇಡಿಗಳ ಕೃತ್ಯವೆಂದು ಶಂಕಿಸಲಾದರೂ, ಹಾನಿಯ ಸ್ವರೂಪ ಗಮನಿಸಿದರೆ ಚಿರತೆಯೇ ನುಗ್ಗಿರಬಹುದೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮಾಹಿತಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಸ್ಪಂದಿಸಿ ಸುತ್ತಮುತ್ತ ಬೋನುಗಳನ್ನು ಅಳವಡಿಸಿದ್ದಾರೆ.

ಚಿರತೆ ಸೆರೆಹಿಡಿಯುವವರೆಗೆ ಸಾರ್ವಜನಿಕರು ಹೆಚ್ಚಿನ ಎಚ್ಚರಿಕೆಯಿಂದಿರಲು ಅಧಿಕಾರಿಗಳು ಸೂಚಿಸಿದ್ದಾರೆ.

Leave a Reply

Your email address will not be published. Required fields are marked *