Breaking
4 Feb 2026, Wed

ತೆಂಗಿನ ಮರದಿಂದ ಜಾರಿ ಬಿದ್ದು ವ್ಯಕ್ತಿಯೋರ್ವ ಸಾವು

ಪುತ್ತೂರು: ತೆಂಗಿನ ಮರದಲ್ಲಿ ಬೆಳೆದಿದ್ದ ಕಾಳು ಮೆಣಸನ್ನು ಅಲ್ಯೂಮಿನಿಯಂ ಏಣಿ ಏರಿ ಕೊಯ್ಯುತ್ತಿದ್ದ ವೇಳೆ ಏಣಿ ಸಹಿತ ಮರದಿಂದ ಜಾರಿ ಬಿದ್ದು ವ್ಯಕ್ತಿಯೋರ್ವ ಮೃತಪಟ್ಟ ಘಟನೆ ಪುತ್ತೂರಿನ ಬೆಟ್ಟಂಪಾಡಿ ಗ್ರಾಮದಲ್ಲಿ ನಡೆದಿದೆ.

ಮೃತಪಟ್ಟವರನ್ನು ಗುಮ್ಮಟೆಗದ್ದೆ ನಿವಾಸಿ ನಿವೃತ್ತ ಮುಖ್ಯ ಶಿಕ್ಷಕ ನಾರಾಯಣ ನಾಯ್ಕ ಪೈಂತಿಮುಗೇರು ಎಂದು ಗುರುತಿಸಲಾಗಿದೆ.

ಅಲ್ಯೂಮಿನಿಯಂ ಏಣಿ ಏರಿ ತೆಂಗಿನ ಮರದಲ್ಲಿದ್ದ ಕಾಳು ಮೆಣಸನ್ನು ಕೊಯ್ಯಲು ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಘಟನೆಯಿಂದ ನಾರಾಯಣ ನಾಯ್ಕರವರಿಗೆ ಗಂಭೀರ ಗಾಯಗಳಾಗಿದ್ದು ಅವರನ್ನು ತಕ್ಷಣವೇ ಪುತ್ತೂರು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮಧ್ಯೆಯೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮೃತರು ಪತ್ನಿ, ಇಬ್ಬರು ಪುತ್ರ ರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *