ಕಾಸರಗೋಡು: ಕುಂಬಳೆ ಸಮೀಪದ ನಾಯ್ಕಾಪು ಎಂಬಲ್ಲಿ ಕಳ್ಳರು ಮನೆಯ ಬಾಗಿಲು ಮುರಿದು ಸುಮಾರು 25 ಸಾವಿರ ರೂ.ಮೌಲ್ಯದ ಬೆಳ್ಳಿ ಹಾಗೂ 5. ಸಾವಿರ ರೂ.ನಗದು ಕಳವುಗೈದ ಘಟನೆ ಜ. 18 ರಂದು ನಡೆದಿದೆ.

ನ್ಯಾಯವಾದಿ ಚೈತ್ರ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದ್ದು ಕುಟುಂಬಸ್ಥರು ಸಂಜೆ ಕುಂಬಳೆಯ ದೇವಸ್ಥಾನಕ್ಕೆ ತೆರಳಿದ್ದ ವೇಳೆ ಮನೆಯ ಹಿಂಭಾಗ ಬಾಗಿಲು ಮುರಿದು ಕಳ್ಳತನ ನಡೆಸಲಾಗಿದೆ.
ಈ ಕುರಿತು ಕುಂಬಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.




