ಸುಳ್ಯ: ಕಾಫಿ ಹೊಟ್ಟು ಸಾಗಿಸುತ್ತಿದ್ದ ಲಾರಿಯೊಂದು ಬೆಂಕಿಗೆ ಆಹುತಿಯಾದ ಘಟನೆ ಸುಳ್ಯದ ಮಡಿಕೇರಿ – ಮಂಗಳೂರು ನಡುವಿನ ದೇವರಕೊಲ್ಲಿ ಬಳಿ ಜ.9 ರಂದು ಮುಂಜಾನೆ ನಡೆದಿದೆ.

ಮೈಸೂರಿನಿಂದ ಕಾಫಿ ಹೊಟ್ಟು ಸಾಗಿಸುತ್ತಿದ್ದ ಲಾರಿಗೆ ಇಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಸುಳ್ಯದ ದೇವರಕೊಲ್ಲಿ ಬಳಿ ಆಕಸ್ಮಿಕವಾಗಿ ಬೆಂಕಿ ತಗುಲಿ ಈ ಅವಘಡ ಸಂಭವಿಸಿದೆ.

ಪರಿಣಾಮ ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಸ್ಥಳಕ್ಕೆ ಮಡಿಕೇರಿಯ ಅಗ್ನಿಶಾಮಕ ದಳದ ಸಿಬ್ಬಂದಿ ಭೇಟಿ ನೀಡಿ ಬೆಂಕಿ ನಂದಿಸಿ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.




