Breaking
19 Sep 2026, Sat

ಸುಳ್ಯ: ತಾಲೂಕು ಮಟ್ಟದ ವಾಲಿಬಾಲ್‌ನಲ್ಲಿ ವಿವೇಕಾನಂದ ವಿದ್ಯಾಸಂಸ್ಥೆಗೆ ದ್ವಿತೀಯ ಸ್ಥಾನ; ಐವರು ವಿದ್ಯಾರ್ಥಿನಿಯರು ಜಿಲ್ಲಾಮಟ್ಟಕ್ಕೆ ಆಯ್ಕೆ

ಜಾಲ್ಸೂರು: ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಸುಳ್ಯ ತಾಲೂಕು ಹಾಗೂ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಸುಳ್ಯ ಇವರ ಸಹಯೋಗದಲ್ಲಿ ನಡೆದ 17ರ ವಯೋಮಾನದ ಬಾಲಕಿಯರ ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾಟದಲ್ಲಿ ಜಾಲ್ಸೂರು ವಿನೋಭಾನಗರ ವಿವೇಕಾನಂದ ವಿದ್ಯಾಸಂಸ್ಥೆಯ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ನೀಡಿದ ಸಹನಾ, ಹೇಮಾನ್ಯ, ಹೇಮಶ್ರೀ, ಸಾತ್ವಿ ಹಾಗೂ ದಿಶಾ ಅವರು ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ತಂಡದ ಸಹನಾ ಅವರು ಉತ್ತಮ ಆಲ್‌ರೌಂಡರ್ ವೈಯಕ್ತಿಕ ಪ್ರಶಸ್ತಿಯನ್ನೂ ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿನಿಯರ ಸಾಧನೆಗೆ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ, ಪೋಷಕ ವೃಂದ, ಮುಖ್ಯೋಪಾಧ್ಯಾಯರು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ಅಭಿನಂದನೆ ಸಲ್ಲಿಸಿದ್ದು, ತರಬೇತುದಾರರಿಗೂ ಶುಭಾಶಯ ಕೋರಿದ್ದಾರೆ.

Leave a Reply

Your email address will not be published. Required fields are marked *