ಬಂಟ್ವಾಳ: ಸಿದ್ಧಕಟ್ಟೆ ಹಿಂದೂ ಹಿತರಕ್ಷಣಾ ವಿಶ್ವಸ್ಥ ಮಂಡಳಿ ಟ್ರಸ್ಟ್ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ 39ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಂಪನ್ನಗೊಂಡಿತು.

ಬುಧವಾರ(ಸೆ.16) ಸಂಜೆ ಗಣೇಶೋತ್ಸವದ ಅಂಗವಾಗಿ ಆಕರ್ಷಕ ಶೋಭಾಯಾತ್ರೆ ನಡೆಯಿತು. ವಿವಿಧ ವಾದ್ಯಮೇಳಗಳು ಹಾಗೂ ಭಕ್ತರೊಂದಿಗೆ ಸಾಗಿದ ಶೋಭಾಯಾತ್ರೆಯ ಬಳಿಕ ಪುಚ್ಚಮೊಗರು ಫಲ್ಗುಣಿ ನದಿಯಲ್ಲಿ ಗಣೇಶನ ವಿಗ್ರಹವನ್ನು ವಿಸರ್ಜನೆ ಮಾಡಲಾಯಿತು.





