ಮಚ್ಚಿನ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಬಳ್ಳಮಂಜ ಶ್ರೀ ಅನಂತೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಕಾರ್ತಿಕ ಪೂಜೆ ಹಾಗೂ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಬಳಿಕ ಭಕ್ತರು ಪ್ರಸಾದ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಸಂತಿ ಲಕ್ಷ್ಮಣ್, ಕುವೆಟ್ಟು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಚಂದ್ರಕಾಂತ ನಿಡ್ಡಾಜೆ, ಮಚ್ಚಿನ ಶಕ್ತಿ ಕೇಂದ್ರದ ಅಧ್ಯಕ್ಷ ನಾರಾಯಣ ಶೆಟ್ಟಿ ನೆತ್ತರ, ಬೂತ್ ಅಧ್ಯಕ್ಷರಾದ ವಿಜಯ್ ಮಡಕ್ಕಿಲ, ರಮೇಶ್ ಕೊಡ್ಯೇಲು, ನೊಣಯ್ಯ, ಸುಕುಮಾರ್, ಜಯಶ್ರೀ ಮಚ್ಚಿನ, ಚೇತನ ಪಲ್ಲತಳ, ಶ್ಯಾಮ್ ಸುಂದರ್, ಚಿತ್ರಂಜನ ಕುರುಡಂಗೆ, ವಿಶ್ವ ಹಿಂದೂ ಪರಿಷತ್‌ನ ಪ್ರಭಾಕರ ಮುದಲಡ್ಕ, ಪುರಂದರ ಶೆಟ್ಟಿ ನೆತ್ತರ ಸೇರಿದಂತೆ ಬಿಜೆಪಿ ಪ್ರಮುಖರು, ಮೋದಿ ಅಭಿಮಾನಿಗಳು, ಭಕ್ತರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.






