ಕಡಬ: ವೃದ್ದರೊಬ್ಬರು ಸರಕಾರಿ ಬಸ್ಸಿನಿಂದ ಇಳಿಯುವ ವೇಳೆ ಆಯತಪ್ಪಿ ಬಿದ್ದು ಮೃತಪಟ್ಟ ಘಟನೆ ಜ. 03 ರಂದು ಕಡಬದ ಕುಂತೂರಿನಲ್ಲಿ ಸಂಭವಿಸಿದೆ.
ಮೃತಪಟ್ಟವರನ್ನು ಪೆರಾಬೆ ಗ್ರಾಮದ ಬೆಳ್ಳಾಡಿ ನಿವಾಸಿ ಬಾಬು (65) ಎಂದು ಗುರುತಿಸಲಾಗಿದೆ.

ಜ. 3 ರಂದು ಸಂಜೆ ವೇಳೆ ಬಾಬು ಅವರು ಸರಕಾರಿ ಬಸ್ಸಿನಲ್ಲಿ ಕುಂತೂರಿಗೆ ಪ್ರಯಾಣಿಸುತ್ತಿದ್ದರು. ಬಸ್ ಕುಂತೂರು ಬಸ್ ನಿಲ್ದಾಣದಲ್ಲಿ ನಿಂತಾಗ ವೃದ್ಧ ಹಿಂಬಾಗಿಲಿನಿಂದ ಇಳಿಯಲು ಮುಂದಾದರು. ಈ ವೇಳೆ ವೃದ್ಧರು ಇಳಿಯುವುದನ್ನು ಗಮನಿಸದ ಬಸ್ ಚಾಲಕ ಬಸ್ಸನ್ನು ಚಲಾಯಿಸಿದ ಪರಿಣಾಮ ವೃದ್ಧರು ಆಯ ತಪ್ಪಿದ ರಸ್ತೆಗೆ ಬಿದ್ದಿದ್ದಾರೆ. ತಕ್ಷಣವೇ ಅವರನ್ನು ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.





