Breaking
25 Sep 2026, Fri

ಬೆಳ್ತಂಗಡಿಯ ಇಂದಬೆಟ್ಟುವಿನಲ್ಲಿ ರಬ್ಬರ್ ತೋಟಕ್ಕೆ ಬಿದ್ದ ಬೆಂಕಿ

ಬೆಳ್ತಂಗಡಿ : ರಬ್ಬರ್ ತೋಟಕ್ಕೆ ಆಕಸ್ಮಿಕವಾಗಿ ಬೆಂಕಿ ತಗುಲಿ ಹಾನಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಎಂಬಲ್ಲಿ ಜ.5 ರಂದು ನಡೆದಿದೆ.

ಇಲ್ಲಿನ ಬಂಗಾಡಿ ಎರ್ಮಾಲ ನಿವಾಸಿ ಪಿ ಆರ್ ಪಳನಿ ಸ್ವಾಮಿ ಹಾಗೂ ಕೇಶವ ನಾಯ್ಕ ರವರ ರಬ್ಬರ್ ತೋಟಕ್ಕೆ ಬೆಂಕಿ ಬಿದ್ದಿದ್ದು ಐನೂರು ರಬ್ಬರ್ ಮರಗಳ ಬುಡಗಳಿಗೆ ಹಾನಿಯಾಗಿದೆ.

ಸ್ಥಳೀಯ ನಿವಾಸಿಗಳು ಸೇರಿ ಬೆಂಕಿ ನಂದಿಸುವ ಮೂಲಕ ಅಪಾರ ಹಾನಿಯನ್ನು ತಪ್ಪಿಸಿದ್ದಾರೆ.

Leave a Reply

Your email address will not be published. Required fields are marked *