ಬಂಟ್ವಾಳ: ವಿದ್ಯುತ್ ಕಂಬಕ್ಕೆ ಲಾರಿಯೊಂದು ಡಿಕ್ಕಿಯಾಗಿ ಲಾರಿ ಮಗುಚಿ ಬಿದ್ದ ಘಟನೆ ಬಿ.ಸಿ.ರೋಡಿನ ತಲಪಾಡಿಯಲ್ಲಿ ಡಿ. 6 ರಂದು ನಸುಕಿನ ವೇಳೆ ನಡೆದಿದೆ.

ವಿದ್ಯುತ್ ಪವರ್ ಸಬ್ ಸ್ಟೇಶನ್ ಎದುರಲ್ಲೇ ಈ ಅಪಘಾತ ನಡೆದಿದ್ದು ಘಟನೆಯಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತಗೊಂಡಿದ್ದು ವಿದ್ಯುತ್ ತಂತಿಗಳು ಹೆದ್ದಾರಿಯಲ್ಲಿ ತುಂಡಾಗಿ ಬಿದ್ದಿದ್ದರಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.
ಘಟನಾ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.





