ಬೆಂಗಳೂರು: ಸಮಾಜ ಸೇವಕ, ರಾಜಕೀಯ ಮುಖಂಡ ಗೋವಿಂದ ಬಾಬು ಪೂಜಾರಿ ಅವರ ಕಚೇರಿಗೆ ಶಂಕರಪುರ ಶ್ರೀ ಶ್ರೀ ಸಾಯಿ ಈಶ್ವರ್ ಗುರೂಜಿ ಅವರು ಜ.5 ರಂದು ಭೇಟಿ ನೀಡಿದರು.
ಈ ವೇಳೆ ಗುರೂಜಿಯನ್ನು ಗೋವಿಂದ ಬಾಬು ಪೂಜಾರಿಯವರು ಆತ್ಮೀಯವಾಗಿ ಸ್ವಾಗತಿಸಿ ಗೌರವ ಅರ್ಪಣೆ ಮಾಡಿದರು.

ಈ ಸಂದರ್ಭ ಬೆಂಗಳೂರು ಬಿಲ್ಲವ ಸಂಘದ ಉಪಾಧ್ಯಕ್ಷೆ ಜಲಜ ಶೇಖರ್ ಪೂಜಾರಿ , ಸಮಾಜಸೇವಕಿ ದೀಪಾ ನಾಯಕ್ , ಬಿಜೆಪಿ ನಾಯಕಿ ಮತ್ತು ಬಿಲ್ಲವ ಮುಖಂಡರಾದ ಗೀತಾಂಜಲಿ ಸುವರ್ಣ ಮತ್ತು ಕಚೇರಿ ಸಿಬ್ಬಂದಿ ಉಪಸ್ಥಿತರಿದ್ದರು.




