ಮಂಗಳೂರು : ನಗರದ ಹೊರವಲಯದ ಗುರುಪುರ ನದಿಗೆ ಯುವತಿಯೊಬ್ಬಳು ಹಾರಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ.
ಮೂಡುಬಿದಿರೆ ಗಾಂಧಿನಗರದ ನಿವಾಸಿಯಾಗಿರುವ ಮೃತ ಯುವತಿ ನವ್ಯಳ ಪ್ರಿಯಕರ ಮಳಲಿ ಗ್ರಾಮದ ಮುರಳಿ ಯಾನೆ ಮನೋಜ್ (21) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

ಯುವತಿಯ ಆತ್ಮಹತ್ಯೆ ಪ್ರಕರಣ ಸಂಬಂಧ ಪ್ರಿಯಕರನ್ನು ವಶಕ್ಕೆ ಪಡೆದಿರುವ ಪೊಲೀಸರು ತೀವ್ರ ವಿಚಾರಣೆ ನಡೆಸಿದ ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಮೂಡುಬಿದಿರೆ ಖಾಸಗಿ ಸಂಸ್ಥೆಯೊಂದರಲ್ಲಿ ಉದ್ಯೋಗಿಯಾಗಿದ್ದ ನವ್ಯ ಸೋಮವಾರ ತನ್ನ ಸ್ನೇಹಿತೆಯೊಂದಿಗೆ ಗುರುಪುರ ನದಿ ತೀರಕ್ಕೆ ತೆರಳಿದ್ದಾಳೆ. ಈ ಸಂದರ್ಭ ನವ್ಯ ದಿಢೀರನೆ ನದಿಗೆ ಹಾರಿದ್ದು ಗಾಬರಿಗೊಂಡ ಸ್ನೇಹಿತೆ ರಕ್ಷಿಸಲು ಕೈಹಿಡಿದು ಎಳೆಯಲು ಪ್ರಯತ್ನಿಸಿದರಾದರೂ, ಆ ಪ್ರಯತ್ನ ವಿಫಲವಾಗಿದೆ.
ಈ ವೇಳೆ ನವ್ಯರ ಪ್ರಾಣಪಕ್ಷಿ ಹಾರಿಹೋಗಿದ್ದು, ರಕ್ಷಣೆಗೆ ಮುಂದಾದ ಸ್ನೇಹಿತೆಯ ಕೈಗೆ ಗಾಯಗಳಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ.



