Breaking
4 Feb 2026, Wed

ಗೂಡ್ಸ್ ಟೆಂಪೊ ಢಿಕ್ಕಿ : ಪಾದಚಾರಿ ಸಾವು

ಕಡಬ : ಗೂಡ್ಸ್ ಟೆಂಪೊ ಢಿಕ್ಕಿ ಹೊಡೆದು ಪಾದಚಾರಿಯೊಬ್ಬರು ಮೃತಪಟ್ಟ ಘಟನೆ ಡಿ.29 ರಂದು ಕಡಬ ಠಾಣಾ ವ್ಯಾಪ್ತಿಯ ಆತೂರಿನಲ್ಲಿ ನಡೆದಿದೆ.

ಕಡಬ ತಾಲೂಕಿನ ಸುಂಕದಕಟ್ಟೆ ನಿವಾಸಿ ಅಬ್ದುಲ್ ಖಾದರ್ ಸಖಾಫಿ ಮೃತಪಟ್ಟ ದುರ್ದೈವಿ.
ಇವರು ಕಾಸರಗೋಡಿನ ಮುಹಿಮ್ಮಾತ್ ಸಂಸ್ಥೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.

ಮದರಂಗಿ ಕಾರ್ಯಕ್ರಮಕ್ಕೆ ಮನೆಯವರ ಜೊತೆ ಬಂದಿದ್ದ ಇವರು ಆತೂರಿನಲ್ಲಿ ಬಸ್ಸಿನಿಂದ ಇಳಿದು, ಮನೆಯವರನ್ನು ರಿಕ್ಷಾದಲ್ಲಿ ಕಳುಹಿಸಿದ್ದರು. ಬಳಿಕ ರಿಕ್ಷಾದಿಂದ ಇಳಿದು ಕಾರ್ಯಕ್ರಮಕ್ಕೆ ನಡೆದುಕೊಂಡು ಹೋಗುತ್ತಿದ್ದ ವೇಳೆ ಗೂಡ್ಸ್ ಟೆಂಪೊ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ. ತಕ್ಷಣವೇ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರು ಅಷ್ಟಾರಗಲೇ ಅವರು ಮೃತಪಟ್ಟಿದ್ದಾರೆ.

ಈ ಕುರಿತು ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *