ಬಂಟ್ವಾಳ: ಸಜೀಪಮುನ್ನೂರು ಮೂರ್ತೇದಾರ ಸೇವಾ ಸಂಘದ ನಿರ್ದೇಶಕರಾದ ಅರುಣ್ ಕುಮಾರ್ ಎಂ ಮಂಜಿಲ ಅವರು ಹೃದಯಾಘಾತದಿಂದ ಇಂದು( ಡಿ. 30) ನಿಧನರಾಗಿದ್ದಾರೆ.
ಅರುಣ್ ಕುಮಾರ್ ಎಂ ಮಂಜಿಲ ಅವರು ಪೂಂಜಾ ದೇವಸ್ಥಾನ ವ್ಯವಸ್ಥಾಪನ ಸಮಿತಿ ಸದಸ್ಯರಾಗಿ, ಶಾರದೋತ್ಸವ ಸಮಿತಿ ಸಕ್ರಿಯ ಸದಸ್ಯರಾಗಿ ಹಾಗೂ ರಾಯಿ ಸಿದ್ಧಕಟ್ಟೆ ಲಯನ್ಸ್ ಕ್ಲಬ್ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದ್ದರು.

ಅರುಣ್ ಮಂಜಿಲರವರ ಅಂತಿಮ ಸಂಸ್ಕಾರ ನಾಳೆ ಬೆಳಗ್ಗೆ ಆರಂಬೋಡಿ ಮಂಜಿಲಾ ಮನೆಯಲ್ಲಿ ನಡೆಸಲಾಗುವುದು ಎಂದು ಕುಟುಂಬ ಮೂಲಗಳಿಂದ ತಿಳಿಸಿದ್ದಾರೆ.




